ಅಖಿಲ ಭಾರತ ಆಂತರ್​ ವಿವಿ ಮಹಿಳಾ ಕ್ರಿಕೆಟ್​ ಪಂದ್ಯಾಟ

MAHE's Women's Cricket Tournament Inauguration Honors Cricketing Stars pic 1
Published on

ಉಡುಪಿ: ಕ್ರಿಕೆಟ್​ನಂತಹ ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಸಾಂಘಿಕ ಕೆಲಸ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಇದರಿಂದಾಗಿ ಗೆಲುವನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಳ್ಳದೆ ತಂಡವಾಗಿ ಕಾರ್ಯನಿರ್ವಹಿಸಿ, ಸೌಹಾರ್ದತೆ ಮನೋಭಾವ ಪ್ರದರ್ಶಿಸಬೇಕು ಎಂದು ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್​ ಕೆ. ರಾವ್​ ಹೇಳಿದರು.

ಮಣಿಪಾಲದ ಎಂಡ್​ಪಾಯಿಂಟ್​ ಮೈದಾನದಲ್ಲಿ ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಮತ್ತು ಅಸೋಸಿಯೇಶನ್​ ಆಫ್​ ಇಂಡಿಯನ್​ ಯೂನಿವರ್ಸಿಟಿ ಸಹಯೋಗದೊಂದಿಗೆ ನಡೆದ ಅಖಿಲ ಭಾರತ ಅಂತರ್​ ವಿಶ್ವವಿದ್ಯಾಲಯ ಮಹಿಳಾ ಕ್ರಿಕೆಟ್​ ಪಂದ್ಯಾಟದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಮಾಹೆ ಮಣಿಪಾಲದ ಕುಲಪತಿ ಲೆಫ್ಟಿನೆಂಟ್​ ಜನರಲ್​ (ಡಾ.) ಎಂ.ಡಿ.ವೆಂಕಟೇಶ್​ ಉದ್ಘಾಟಿಸಿದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್​.ಎಸ್​. ಬಲ್ಲಾಳ್​ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಉಪಸ್ಥಿತರಿದ್ದರು. ಬಿಸಿಸಿಐ ಚಾಲೆಂರ್ಜಸ್​ ಟ್ರೋಫಿ 2023 ರಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿರುವ ಉಡುಪಿಯ ನಿಶ್ಚಿತ್​ ಪೈ ಮತ್ತು 2023ರಲ್ಲಿ ಕರ್ನಾಟಕ ಅಂಡರ್​ 19 ಮಹಿಳಾ ಕ್ರಿಕೆಟ್​ ತಂಡವನ್ನು ಪ್ರತಿನಿಧಿಸಿದ ತೇಜಸ್ವಿನಿ ಉದಯ್​ ಕುಮಾರ್​ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net