ಮಹೇಂದ್ರ ಸಿಂಘಿ ಅವರಿಗೆ ಕಾಂಠಾ ಪ್ರಾಂತ ಗೌರವ ಪ್ರಶಸ್ತಿ

New Singhi new
Published on

ಹುಬ್ಬಳ್ಳಿ : ಹೈದ್ರಾಬಾದ್​ನಲ್ಲಿ ನಡೆದ ಎರಡು ದಿನಗಳ ‘ಅಖಿಲ ಭಾರತೀಯ ಕಾಂಠಾ ಪ್ರಾಂತ ಸಮ್ಮೇಳನ -2025’ದಲ್ಲಿ ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಸೇವೆ ಪರಿಗಣಿಸಿ ಹುಬ್ಬಳ್ಳಿಯ ಮಹೇಂದ್ರ ಸಿಂಘಿ ಅವರಿಗೆ ‘ಕಾಂಠಾ ಪ್ರಾಂತ ಗೌರವ’ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ದೇಶದ ವಿವಿಧೆಡೆಯಿಂದ 2 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಉತ್ತರ ಕರ್ನಾಟಕದಿಂದ ಕಾಂಠಾ ಪ್ರಾಂತ ಓಸ್ವಾಲ್ ಸಜ್ಜನ ಸಂಘದ ಹುಬ್ಬಳ್ಳಿಯ ಆಧ್ಯಕ್ಷ ಶಾಂತಿಲಾಲ್ ಬೊಹರಾ, ಮಾಜಿ ಅಧ್ಯಕ್ಷ ಅಶೋಕ ಕೋಠಾರಿ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಮಹೇಂದ್ರ ಸಿಂಘಿಯವರ ಸಮಾಜದತ್ತ ಸಮರ್ಪಣೆ, ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ದೀರ್ಘಾವಧಿಯ ಸೇವೆ ಹಾಗೂ ಸಾಂಸ್ಕೃತಿಕ ಜಾಗೃತಿಗೆ ನೀಡಿರುವ ಕೋಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹೇಂದ್ರ ಸಿಂಘಿ, ಈ ಗೌರವವನ್ನು ಹುಬ್ಬಳ್ಳಿಯ ಕಾಂಠಾ ಪ್ರಾಂತ ಸಮಾಜಕ್ಕೆ ಸಮರ್ಪಿಸುವುದಾಗಿ ತಿಳಿಸಿದರು. ಈ ಪ್ರಶಸ್ತಿ ಸಮಾಜ ಸೇವೆಯ ಮತ್ತಷ್ಟು ಜವಾಬ್ದಾರಿ ನೀಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net