ಮರದ ಅಂಬಾರಿ ಹೊತ್ತ ಮಹೇಂದ್ರ

Mahendra carrying a wooden ambari
Published on

ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯ ಯಶಸ್ವಿಗೊಳಿಸಲು ಈಗಾಗಲೇ ಮರದ ಅಂಬಾರಿ ಹೊರುವ ತಾಲೀಮು ಪ್ರಾರಂಭಗೊಂಡಿದ್ದು, ಶನಿವಾರ ಮಹೇಂದ್ರ ಆನೆಯು ಯಶಸ್ವಿಯಾಗಿ ಮರದ ಅಂಬಾರಿ ಹೊತ್ತು ಸಾಗಿತು.

ಮರದ ಅಂಬಾರಿಯನ್ನು ಬುಧವಾರ ಅಂಬಾರಿ ಆನೆ ಅಭಿಮನ್ಯುವಿಗೆ ಹೊರಿಸಲಾಗಿತ್ತು. ಅಭಿಮನ್ಯು ನಗರದ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಶಸ್ವಿಯಾಗಿ ಸಾಗಿತು. ನಂತರದ ಸರದಿಯಲ್ಲಿ ಇದೀಗ ಮಹೇಂದ್ರ ಆನೆಯು 280 ಕೆ.ಜಿ. ತೂಕದ ಮರದ ಅಂಬಾರಿ, ಗಾದಿ, ನಮ್ದ ಮತ್ತು ಮರಳಿನ ಮೂಟೆ ಸೇರಿದಂತೆ ಒಟ್ಟು 750 ಕೆ.ಜಿ. ಭಾರವನ್ನು ಹೊತ್ತು ಸಾಗಿತು. ಮಹೇಂದ್ರ ಅನೆಗೆ ಅಭಿಮನ್ಯು, ಧನಂಜಯ, ಭೀಮ, ಪ್ರಶಾಂತ, ಗೋಪಿ, ಕಂಜನ್, ಸುಗ್ರೀವ, ರೋಹಿತ, ಏಕಲವ್ಯ, ದೊಡ್ಡಹರವೆ ಲಕ್ಷ್ಮೀ, ವರಲಕ್ಷ್ಮೀ ಸಾಥ್ ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net