ಮಧುಮೇಹಿ ಮಕ್ಕಳಿಗಾಗಿ ಸಹಯೋಗ ಯೋಜನೆ

udp-7-kmc
Published on

ಉಡುಪಿ: ಮಾಹೆ ಮಣಿಪಾಲದಲ್ಲಿ ಟೈಪ್​ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ ನೀಡುವ ಮಣಿಪಾಲ ಫೌಂಡೇಶನ್​ ಬೆಂಬಲಿತ 'ಸಹಯೋಗ' ಕಾರ್ಯಕ್ರಮಕ್ಕೆ ಶುಕ್ರವಾರ ಎಂಇಎಂಜಿ ಮುಖ್ಯಸ್ಥ ಮತ್ತು ಮಾಹೆ ಟ್ರಸ್ಟ್​ನ ಅಧ್ಯಕ್ಷ ಡಾ. ರಂಜನ್​ ಆರ್​. ಪೈ ಚಾಲನೆ ನೀಡಿದರು.

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ , ಉಪ ಕುಲಪತಿ ಲೆಫ್ಟಿನೆಂಟ್​ ಜನರಲ್​ ಡಾ.ಎಂ.ಡಿ. ವೆಂಕಟೇಶ್​, ಮಣಿಪಾಲ ಫೌಂಡೇಶನ್​ನ ಸಿಇಒ ಡಾ. ಹರಿನಾರಾಯಣ್​ ಶಮಾರ್, ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಲೆಸ್ಲಿ ಎಡ್ವರ್ಡ್​ ಎಸ್​ ಲೆವಿಸ್​, ಎಂಡೋಕ್ರಿನೊಲೊಜಿ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಮತ್ತು ಮಕ್ಕಳ ಎಂಡೋಕ್ರಿನೊಲೊಜಿಸ್ಟ್​ ಹಾಗೂ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೌಶಿಕ್​ ಉರಾಳ ಎಚ್​., ಮಾಹೆಯ ಆರೋಗ್ಯ ವಿಜ್ಞಾನಗಳ ಸಹ-ಕುಲಪತಿ ಡಾ. ಶರತ್​ ಕೆ. ರಾವ್​, ರಿಜಿಸ್ಟ್ರಾರ್​ ಡಾ. ಪಿ. ಗಿರಿಧರ್​ ಕಿಣಿ, ಕೆಎಂಸಿ ಮಣಿಪಾಲದ ಡೀನ್​ ಡಾ. ಪದ್ಮರಾಜ್​ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿ ಓ ಓ ಡಾ. ಆನಂದ್​ ವೇಣುಗೋಪಾಲ್​, ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಉಪಸ್ಥಿತರಿದ್ದರು.

ಏನಿದು ಸಹಯೋಗ? ಟೈಪ್​ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಸಮಗ್ರ ಆರೈಕೆ ಉಪಕ್ರಮಕ್ಕೆ ಮಣಿಪಾಲ್​ ಫೌಂಡೇಶನ್​ನಿಂದ ಆರ್ಥಿಕ ಸಹಾಯ ಒದಗಿಸಲಿದೆ. ಟೈಪ್​ 1 ಡಯಾಬಿಟಿಸ್​ ಮೆಲ್ಲಿಟಸ್​ನಿಂದ ಬಳಲುತ್ತಿರುವ ಮಕ್ಕಳು ಅಗತ್ಯವಾದ ದುಬಾರಿ ಚಿಕಿತ್ಸೆಯನ್ನು ಪಡೆಯಲು ಅಸಮರ್ಥರಾಗಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಇನ್ಸುಲಿನ್​, ಇನ್ಸುಲಿನ್​ ಪೆನ್ನುಗಳು, ಗ್ಲುಕೋಮೀಟರ್​ಗಳು, ಗ್ಲೂಕೋಸ್​ ಪರೀಕ್ಷಾ ಪಟ್ಟಿಗಳು ಮತ್ತು ದೀರ್ಘಕಾಲೀನ ತೊಡಕುಗಳಿಗೆ ಸ್ಕ್ರೀನಿಂಗ್​ಗಳಿಗೆ ಸಬ್ಸಿಡಿ ನೀಡಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯವನ್ನು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ. ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಎಲ್ಲಾ ಮಕ್ಕಳಿಗೆ ಅಗತ್ಯ ವೈದ್ಯಕಿಯ ಸಂಪನ್ಮೂಲಗಳು ಲಭ್ಯವಾಗುವಂತೆ ನೋಡಿಕೊಳ್ಳುವ ಮಾಹೆಯ ಬದ್ಧತೆಯನ್ನು ಸಹಯೋಗ ಉಪಕ್ರಮವು ಪ್ರತಿಬಿಂಬಿಸುತ್ತದೆ. ಡಾ. ಹೆಚ್​.ಎಸ್​. ಬಲ್ಲಾಳ್​ ಸಹ ಕುಲಾಧಿಪತಿ , ಮಾಹೆ ಮಣಿಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net