ಕಲೆಯು ಸಾರ್ಥಕ ಜೀವನದ ಸಾಧನ: ಪಾಸ್ವಾನ್

udp-24-madhubani 1
Published on

ಉಡುಪಿ: ಕಲಾ ಪ್ರಾಕಾರಗಳು ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ಜನರನ್ನು ಒಂದುಗೂಡಿಸಿ, ಏಕತೆಯ ಸಂದೇಶವನ್ನು ಹರಡುತ್ತವೆ. ಕಲೆಯು ಸಾರ್ಥಕ ಜೀವನದ ಸಾಧನವಾಗಿದೆ ಎಂದು ಬಿಹಾರದ ಮಧುಬನಿ ಕಲಾವಿದ ಸಂತೋಷ್ ಕುಮಾರ್ ಪಾಸ್ವಾನ್ ಹೇಳಿದರು.

ಸೋಮವಾರ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವಿದ್ಯಾರ್ಥಿಗಳೊಂದಿಗೆ ಮಧುಬನಿ ಕಲೆಯ ಬಗ್ಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ರಾಮಾಯಣ ಮತ್ತು ಮಹಾಭಾರತವು ಮಧುಬನಿ ವರ್ಣಚಿತ್ರಗಳ ಪ್ರಮುಖ ವಿಷಯಗಳಾಗಿದೆ. ಮಧುಬನಿ ವರ್ಣಚಿತ್ರಗಳಲ್ಲಿನ ಮಿಥಿಲಾ, ಗೋಧ್ನಾ ಮತ್ತು ತಾಂತ್ರಿಕ ಶೈಲಿಗಳನ್ನು ಮತ್ತು ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ವಿವರಿಸಿದರು.

ಸರವಣ್ ಕುಮಾರ್ ಪಾಸ್ವಾನ್ ಮತ್ತು ಉಜಾಲಾ ಕುಮಾರಿ ಮಾತನಾಡಿದರು. ಜಿ.ಸಿ.ಪಿ.ಎ.ಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಕಲಾವಿದ ಡಾ.ಜನಾರ್ದನ ಹಾವಂಜೆ, ಪ್ರೊ.ಫಣಿರಾಜ್ ಉಪಸ್ಥಿತರಿದ್ದರು. ಮಧುಬನಿ ಕಲಾಕಾರ್ಯಾಗಾರ ಏ.30 ರವರೆಗೆ ಉಡುಪಿಯಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net