

ಉಡುಪಿ: ಮೆಕಾಲೆ ಪ್ರಣಿತ ಸುಳ್ಳು ಇತಿಹಾಸವನ್ನು ಪಾಶ್ಚಾತ್ಯ ಜಗತ್ತು ಸ್ವೀಕರಿಸಿದ್ದು, ದುರದೃಷ್ಟವಶಾತ್ ಭಾರತದಲ್ಲೂ ಶೈಕ್ಷಣಿಕ ಕೇಂದ್ರಗಳಲ್ಲಿ ಅದನ್ನೆಈ ಕಲಿಸಲಾಗುತ್ತಿದೆ. ಇದು ಭಾರತೀಯರಲ್ಲಿ ನಮ್ಮ ಸಂಸತಿ ಬಗ್ಗೆ ಕೀಳರಿಮೆ ಬೆಳೆಯಲು ಕಾರಣವಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಅಧ್ಯಕ್ಷ ಡಾ. ವಿನಯ್ ಸಹಸ್ರಬುದ್ಧೆ ಹೇಳಿದರು.
ಗುರುವಾರ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಭಿವೃದ್ಧಿಪಡಿಸಿದ "ಸಾಂಪ್ರದಾಯಿಕ ಭಾರತೀಯ ಜ್ಞಾನಪರಂಪರೆಯ ಸಾರ್ವತ್ರೀಕರಣ ಆನ್ಲೈನ್ ಪೋರ್ಟಲ್ ಉದ್ಘಾಟಿಸಿ ಮಾತನಾಡಿದರು.
ಭಾರತದ ಬಗ್ಗೆ ವಿದೇಶಗಳಲ್ಲಿರುವ ತಪು ಅಭಿಪ್ರಾಯ ಹೋಗಲಾಡಿಸಲು ಇಂಥ ಪೋರ್ಟಲ್ ಅತೀ ಅಗತ್ಯವಾಗಿದೆ. ಭಾರತದ ಭವ್ಯ ಇತಿಹಾಸ ಮತ್ತು ವರ್ತನಮಾನವನ್ನು ಒಂದೇ ಕಡೆ ಸಿಗುವಂತೆ ಮಾಡಲಾಗಿದ್ದು, ಅನಿವಾಸಿ ಭಾರತೀಯರಿಗೆ ಸಂಸತಿ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲು ಅನುಕೂಲಕರವಾಗಿದೆ ಎಂದರು.
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಉಪ ಮಹಾನಿರ್ದೇಶಕ ಅಭಯ್ ಕುಮಾರ್ ಮಾತನಾಡಿ, ಪೋರ್ಟಲ್ ಭಾರತೀಯ ಸಂಸ್ಕತಿಯ ಬಗ್ಗೆ ಜ್ಞಾನ ಮತ್ತು ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಪ್ರೇಕ್ಷಕರಿಗೆ ಕೊಂಡೊಯ್ಯುವುದು, ದೇಶದ ಶ್ರೀಮಂತ ನಾಗರಿಕತೆ ಮತ್ತು ಸಂಸತಿ ಕಲಿಯುವವರಿಗೆ ವೇದಿಕೆ ಕಲ್ಪಿಸುತ್ತದೆ. - 'ಭಾರತದ ವಾಸ್ತುಶಿಲ್ಪ', 'ಭಾರತದಲ್ಲಿ ಪಾಕಶಾಸ್ತ್ರ ', 'ಭಾರತೀಯ ಉಡುಪುಗಳು', 'ಭಾರತೀಯ ಚಿತ್ರರಂಗದ ಪರಿಚಯ' ಮತ್ತು 'ರಾಮಾಯಣ ಮತ್ತು ಮಹಾಭಾರತ' ಹೀಗೆ 5 ವಿಭಾಗ ಹೊಂದಿದ್ದು, ಪ್ರತಿ ಸಂಚಿಕೆಯಲ್ಲಿ ದೃಶ್ಯ ಮತ್ತು ಧ್ವನಿ ಮುದ್ರಿತ ಚಿತ್ರಗಳು, ಸಂದರ್ಶನಗಳು ಮತ್ತು ಪ್ರದರ್ಶನಗಳನ್ನು ಒಳಗೊಂಡಿದೆ. ವಿದೇಶಿಗರಿಗೆ ಮಾತ್ರವಲ್ಲದೇ, ನಮ್ಮ ಸಂಸ್ಕೃತಿಯ ಆಳ ಮತ್ತು ಶ್ರೀಮಂತಿಕೆಯ ಬಗ್ಗೆ ತಿಳಿದಿರದ ಭಾರತದಲ್ಲಿ ನೆಲೆಸಿರುವವರೂ ಇದರ ಉಪಯೋಗ ಪಡೆಯಬಹುದು ಎಂದರು.
ಮಂಗಳೂರು ವಿವಿ ನಿವೃತ್ತ ಉಪಕುಲಪತಿ ಪ್ರೊ. ಚಿನ್ನಪ್ಪ ಗೌಡ ಹಾಗೂ ಕರ್ನಾಟಕ ಸಂಸತ ವಿವಿ ಪ್ರಾಧ್ಯಾಪಕಿ ಶಿವಾನಿ ವಿ. ಉಪನ್ಯಾಸ ನೀಡಿದರು. ಐಸಿಸಿಆರ್ನ ಮಹಾನಿರ್ದೇಶಕ ಕುಮಾರ್ ತುಹಿನ್, ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ. ನಾರಾಯಣ್ ಸಭಾಹಿತ್, ಮಾಹೆ ರಿಜಿಸ್ಟ್ರಾರ್ ಡಾ. ಗಿರಿಧರ ಕಿಣಿ, ಮಾಹೆ ಸದಸ್ಯ ಸೋಮನಾಥ ಪೈ ಉಪಸ್ಥಿತರಿದ್ದರು.