

ಇಂಡಿ: ಸಮಾಜದ ಅಂಕುಡೊಂಕು ತಿದ್ದುವ ಸಮಾಜ ಸುಧಾರಕರಾಗಿ, ಜನರಾಡುವ ಭಾಷೆಯಲ್ಲಿ ಬೋಧನೆ ಮಾಡಿದ ಜನಪರ ನಿಲುವಿನ ಮಹಾಯೋಗಿ ವೇಮನರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.
ಕನ್ನಡದಲ್ಲಿ ಸರ್ವರಿದ್ದಂತೆ, ತೆಲುಗಿನಲ್ಲಿ ವೇಮನರು. ಯೋಗ ವಿಚಾರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರ ಕವಿತೆಗಳಲ್ಲಿ ಸಾಮಾಜಿಕ, ನೈತಿಕ, ವಿಡಂಬನಾತ್ಮಕ ಸಂಗತಿಗಳಿವೆ. ಸಮಾಜ ಚಿಂತಕರಾಗಿ ಅವರು ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದವರು. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶಿಕಿ ಎಸ್.ಪಿ.ಪೂಜಾರಿ ಮಾತನಾಡಿ, ಸಾಮಾನ್ಯ ಜ್ಞಾನದ ಮೂಲಕವೇ ಡಾಂಭಿಕತೆ, ಧರ್ಮ& ಅಧರ್ಮ, ಜ್ಞಾನ&ಅಜ್ಞಾನ ಹಾಗೂ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳುವ ಪದ್ಯಗಳನ್ನು ರಚಿಸುವ ಮೂಲಕ ತೆಲುಗಿನ ಸರ್ವನೆನಿಸಿಕೊಂಡಿದ್ದ ವೇಮನರ ವಿಚಾರಗಳು ಇಂದಿಗೂ ಮಹತ್ವ ಪಡೆದಿವೆ ಎಂದು ಹೇಳಿದರು.
ಮುಖ್ಯಶಿಕ ಎಸ್.ಎಸ್.ಅರಬ ಅಧ್ಯತೆ ವಹಿಸಿದ್ದರು. ಅತಿಥಿ ಶಿಕಿ ಅಲ್ಫಿಯಾ ಅಂಗಡಿ, ಸ್ಥಳಿಯರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಇತರರಿದ್ದರು.