ಸಮಾಜಕ್ಕೆ ನೈತಿಕ ಮಾರ್ಗ ಬೋಧಿಸಿದ ಮಹಾವೀರರು

Mahavira who taught the moral path to society
ಕುಳಗೇರಿ ಕ್ರಾಸ್‌ನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಈರಪ್ಪ ಕುಪ್ಪಸ್ತ, ಈರಪ್ಪ ತಿಗಡಿ ಮತ್ತು ಡಾ. ವೀರೇಶ ಸತ್ತಿಗೇರಿ ಅವರನ್ನು ಸನ್ಮಾನಿಸಲಾಯಿತು. ಶಾಂತಲಿಂಗ ಶ್ರೀಗಳು, ಮಂಗಳಾ ಪಾಟೀಲ, ಡಾ. ವಿ.ವಿ. ಹಿರೇಮಠ, ಸುವರ್ಣ ಅಕ್ಕಿ, ತೇಜಸ್ವಿನಿ ಶಿರಿಯಪ್ಪಗೌಡ್ರ, ಸುಕನ್ಯಾ ಸಾಲಿ ಮತ್ತಿತರರಿದ್ದಾರೆ.
Published on

ಕುಳಗೇರಿ ಕ್ರಾಸ್: ಜೈನ ಧರ್ಮದ 24ನೇ ಮತ್ತು ಕೊನೆಯ ತೀಥರ್ಂಕರರಾದ ಭಗವಾನ್ ಮಹಾವೀರರು ಪಂಚ ತತ್ವಗಳ ಮೂಲಕ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ಪಸರಿಸಿ ಸತ್ಯ, ಅಹಿಂಸೆ, ಶಾಂತಿ ಸಂದೇಶದ ಮೂಲಕ ಸಮಾಜಕ್ಕೆ ನೈತಿಕ ಮಾರ್ಗ ತೋರಿಸಿದ್ದಾರೆ ಎಂದು ಶಾಂತಲಿಂಗ ಶ್ರೀಗಳು ಹೇಳಿದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ದೊರೆಸ್ವಾಮಿ ಜನಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 369ನೇ ಮಾಸಿಕ ಶಿವಾನುಭವ ಹಾಗೂ ಮಹಾವೀರರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕತೆಯ ಮಾರ್ಗವನ್ನು ಅಳವಡಿಸಿಕೊಂಡ ಭಗವಾನ್ ಮಹಾವೀರರು ತಮ್ಮ ಜೀವನದುದ್ದಕ್ಕೂ ಮಾನವಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಾರ್ಗವನ್ನು ತೋರಿಸಿದರು. ಮಹಾವೀರರು 5ಮುಖ್ಯ ತತ್ವಗಳನ್ನು ನೀಡಿದ್ದು, ಅವುಗಳನ್ನು ಪಂಚಶೀಲ ತತ್ವಗಳು ಎಂದೂ ಕರೆಯಲಾಗುತ್ತದೆ ಎಂದರು.

ಡಾ.ವಿರೇಶ ಸತ್ತಿಗೇರಿ ಮಾತನಾಡಿ, ಇಂದು ಯುವ ಜನತೆ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ದುಶ್ಚಟದ ವ್ಯಾಮೋಹಕ್ಕೆ ತುತ್ತಾಗಿ ಶರೀರವನ್ನು ರೋಗಗಳ ತವರೂರಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದೇಶದ ಭವಿಷ್ಯ ರೂಪಿಸಬೇಕಾಗಿದೆ ಎಂದರು.

ಶಿರೋಳದ ಈರಪ್ಪ ಕುಪ್ಪಸ್ತ, ಈರಪ್ಪ ತಿಗಡಿ ಮತ್ತು ಪಿಎಚ್.ಡಿ ಪದವಿ ಪಡೆದ ಡಾ. ವೀರೇಶ ಸತ್ತಿಗೇರಿ ಅವರನ್ನು ಮಠದ ವತಿಯಿಂದ ಸತ್ಕರಿಸಲಾಯಿತು. ಮಂಗಳಾ ಪಾಟೀಲ, ಸಾಹಿತಿ ಡಾ. ವಿ.ವಿ. ಹಿರೇಮಠ, ನ್ಯಾಯವಾದಿ ಸುವರ್ಣ ಅಕ್ಕಿ, ತೇಜಸ್ವಿನಿ ಶಿರಿಯಪ್ಪಗೌಡ್ರ, ಸುಕನ್ಯಾ ಸಾಲಿ, ದಾಕ್ಷಾಯಣಿ ಶಿವಪ್ಪಯ್ಯನಮಠ, ಪದ್ಮಾವತಿ ಗಾಣಿಗೇರ, ಭಾವನಾ ಪಾಟೀಲ, ಈರಪ್ಪ ಕುಪ್ಪಸ್ತ, ಈರಪ್ಪ ತಿಗಡಿ ಮತ್ತಿತರರಿದ್ದರು.

ಪ್ರೊ.ಆರ್.ಕೆ. ಐನಾಪೂರ ನಿರೂಪಿಸಿದರು, ಮಹಾಂತೇಶ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net