ಜೈನ ಬ್ರಾಹ್ಮಣ ಸ್ವಯಂ ಸೇವಾ ಸ್ನೇಹ ಬಳಗದ ವತಿಯಿಂದ ಮಹಾವೀರ ತೀರ್ಥಂಕರರ ಜಯಂತಿ ಆಚರಣೆ

12
Published on

ಮೈಸೂರು: ಜೈನ ಬ್ರಾಹ್ಮಣ ಸ್ವಯಂ ಸೇವಾ ಸ್ನೇಹ ಬಳಗದ ವತಿಯಿಂದ ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಜಯಂತಿ ಅಂಗವಾಗಿ ಗುರುವಾರ ದಿನವಿಡೀ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಹಾವೀರ ಮೂರ್ತಿ ಮೆರವಣಿಗೆ, ಶ್ರೀ ಪಾರ್ಶ್ವನಾಥ ತೀರ್ಥಂಕ ಹಾಗೂ ಮಹಾವೀರ ತೀರ್ಥಂಕರರಿಗೆ ನವಕಳಸ ಪಂಚಾಮೃತಾಭಿಷೇಕ, ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಇದೇ ವೇಳೆ ಆಯೋಜಿಸಿದ್ದ ಮಹಾವೀರ ಮೂರ್ತಿ ಮೆರವಣಿಗೆಗೆ ಬಳಗದ ಪ್ರಮುಖರಾದ ಎಂ.ಪಿ.ನಾಭಿರಾಜ್ ಚಾಲನೆ ನೀಡಿದರು. ಬಳಿಕ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಿಂದ ಆರಂಭಗೊಂಡ ಮೆರವಣಿಗೆ ವಿದ್ಯಾರಣ್ಯಪುರಂ, ಚಾಮುಂಡಿಪುರಂನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕಳಸ ಹಿಡಿದು ಸಾಗಿದರು.

‘ಮಹಾವೀರ ಜಯಂತಿ ಎಂದರೆ ಭಗವಾನ್ ಮಹಾವೀರರ ಜನ್ಮದ ನೆನೆಪಿನ ದಿನ. ಅವರು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಜೈನ ಧರ್ಮದ ಪಾಂಚ ಮೌಲ್ಯಗಳನ್ನು ಪ್ರತಿಪಾದಿಸಿದರು. ಈ ತತ್ವಗಳು ಇಂದು ಸಹ ಸಮಾನವಾಗಿ ಪ್ರಸ್ತುತವಾಗಿವೆ ಮತ್ತು ಮಾನವೀಯತೆ ಹಾಗೂ ಶಾಂತಿಯ ದಾರಿದೀಪವಾಗಿವೆ ಎಂದು ಎಂ.ಪಿ.ನಾಭಿರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net