ನಗರದಲ್ಲಿ ಮಹಾವೀರ ಜಯಂತಿ ಆಚರಣೆ

mysore
Published on

ಮೈಸೂರು: ಭಗವಾನ್ ಶ್ರೀ ಮಹಾವೀರ ತೀರ್ಥಂಕರರ ಜಯಂತಿಯನ್ನು ಜೈನ ಸಮುದಾಯದವರು ಭಾನುವಾರ ಅದ್ದೂರಿಯಾಗಿ ಆಚರಿಸಿದರು.


ಜಯಂತಿ ಪ್ರಯುಕ್ತ ತಮ್ಮ ವ್ಯಾಪಾರ ವಹಿವಾಟಿಗೆ ರಜೆ ಘೋಷಿಸಿದ ಜೈನರು ದಿನವಿಡೀ ನಡೆದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತ್ಯಾಗ, ವೈರಾಗ್ಯ ಮೂರ್ತಿಯನ್ನು ಸ್ಮರಿಸಿದರು.


ಬೆಳಗ್ಗೆ ಧ್ವಜಾರೋಹಣ ನಂತರ ಮಹಾವೀರಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ, ಅಭಿಷೇಕ, ಮಂಗಳಾರತಿ ನೆರವೇರಿತು. ಬಳಿಕ ನಡೆದ ಮೆರವಣಿಗೆಯಲ್ಲಿ ನೂರಾರು ಜೈನ ಸಮುದಾಯದವರು ಭಾಗಿಯಾದರು. ಮಹಿಳೆಯರು ನೃತ್ಯ ಮಾಡುವ ಮೂಲಕ ಗಮನ ಸೆಳೆದರು.


ಶ್ರೀ ಮಹಾವೀರ ಸೇವಾ ಸಂಸ್ಥಾನದ ವತಿಯಿಂದ ಎಂ.ಎಲ್.ವರ್ಧಮಾನಯ್ಯ ಸ್ಮಾರಕ ಭವನದಲ್ಲಿ ಸಂಜೆ ಆಯೋಜಿಸಿದ್ದ ಸಭಾಕಾರ್ಯಕ್ರಮದಲ್ಲಿ ಸಮಾಜ ಸೇವಕಿ, ಆಟಿಸಂ ತಜ್ಞೆ ಹೇಮಾಮಾಲಿನಿ ಜಯರಾಮ್ ಅವರಿಗೆ ಶ್ರೀ ಮಹಾವೀರ ಅಹಿಂಸಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.


ಶ್ರೀ ಕ್ಷೇತ್ರದ ಆರತಿಪುರ ಜೈನಮಠದ ಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷೆ ಎಂ.ಆರ್.ಸುನೀಲ್ ಕುಮಾರ್ ಜೈನ್, ಉದ್ಯಮಿ ಎಂ.ಎ.ಸುಧೀರ್‌ಕುಮಾರ್, ಎಂಎಲ್ ಜೈನ್ ಬೋಡಿ ಹೋಮ್‌ನ ವ್ಯವಸ್ಥಾಪಕ ಜಯರತ್ಮಮ್ಮ, ಜೈನ ಮಹಿಳಾ ಸಮಾಜದ ಲತಾ ಸುದರ್ಶನ್ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net