

ಇಳಕಲ್ಲ(ಗ್ರಾ): ಅಹಿಂಸೆಯ ಪ್ರತಿಪಾದಕರಾಗಿದ್ದ ಭಗವಾನ್ ಮಹಾವೀರರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅಹಿಂಸೆ ಮಾರ್ಗದಲ್ಲಿ ನಡೆಯಬೇಕು ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಹಾವೀರರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ದಿಗಂಬರ ಜೈನ ಸಮಾಜದ ಅಧ್ಯಕ್ಷ ಧನಪಾಲ ಪಾಟೀಲ, ಶ್ರೀಪಾಲ ಪಾಟೀಲ, ಮೋಹನ ವಂದಕುದರಿ, ಪದ್ಮಾರಾಜ ವಂದಕುದರಿ, ಡಾ.ಚಂದ್ರಕಾಂತ ವಂದಕುದರಿ, ಬಾಹುಬಲಿ ವಂದಕುದರಿ, ಭರತೇಶ ವಂದಕುದರಿ, ಅಶೋಕ ಹೂಲಿ, ಪವನಕುಮಾರ ಪಾಟೀಲ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಯತಿರಾಜ ದರಕ, ಮುಖಂಡ ಶಬ್ಬೀರ ಬಾಗವಾನ, ವಿಠ್ಠಲ ಜಕ್ಕಾ, ಅಹ್ಮದಸಾಬ ಬಾಗವಾನ ಕಂಡಕ್ಟರ್ ಮತ್ತಿತರರಿದ್ದಾರೆ.