ಯುವಜನಾಂಗಕ್ಕೆ ಶ್ರೇಷ್ಠ ತತ್ವ ಬೋಧನೆ : ನೇರಂಕಿ ಪಾರ್ಶ್ವನಾಥ ಹೇಳಿಕೆ

2
Published on

ಮೂಡುಬಿದಿರೆ: ಹಸಿರು ಪ್ರಗತಿ ಸಂಕೇತ, ಬೆಳವಣಿಗೆ ಸಂಕೇತ. ಪ್ರಪಂಚಕ್ಕೆ ಶ್ರೇಷ್ಠ ತತ್ವ ಬೋಧಿಸಿದ ಒಂದು ಸಿದ್ಧಾಂತ ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂಬ ಉದ್ದೇಶ ಪ್ರತಿಯೊಬ್ಬರಿಗೂ ಇರಬೇಕು. ಪ್ರಕೃತಿ ನಮಗೆ ಕೊಟ್ಟ ಒಳ್ಳೆಯದನ್ನು ಹಾಳು ಮಾಡದೆ ಮುಂದಿನ ಜನಾಂಗಕ್ಕೆ ಅದನ್ನು ಉಳಿಸುವುದು ನಮ್ಮ ಕರ್ತವ್ಯ ಎಂದು ನೇರಂಕಿ ಪಾರ್ಶ್ವನಾಥ ಹೇಳಿದರು.

ಶ್ರೀ ಮಹಾವೀರ ಜನ್ಮಕಲ್ಯಾಣದ ಪ್ರಯುಕ್ತ ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಯಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಜೀವನ ಧರ್ಮ, ಜಿನಬಸದಿ, ಜಿನಧರ್ಮಾಚರಣೆಗಳನ್ನು ವಿಶೇಷ ತಾಂತ್ರಿಕತೆ ನೆರವಿನಿಂದ ವಿಶ್ವದೆಲ್ಲೆಡೆ ಪಸರಿಸುತ್ತಿರುವ ನೇರಂಕಿ ಪಾರ್ಶ್ವನಾಥ ದಂಪತಿಗೆ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಕಾನೂನು ಮಹಾವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಅರಳ ರಾಜೇಂದ್ರ ಶೆಟ್ಟಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು.

ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ, ಉಪನ್ಯಾಸಕ ಸುನಾದ್ ರಾಜ್ ಜೈನ್ ವಂದಿಸಿದರು. ಆಡಳಿತ ನಿರ್ದೇಶಕ ಡಾ.ಬಿ.ಪಿ.ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net