ಮಹಾವೀರ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಸ್ನೇಹ ಸಮ್ಮೇಳನ

New Mahaveer New
Published on

ಹುಬ್ಬಳ್ಳಿ : ಇಲ್ಲಿನ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳಾದ ಶ್ರೀ ಮಹಾವೀರ ಆಂಗ್ಲ ಮಾಧ್ಯಮ ಶಾಲೆ ಮತ್ತು ರತ್ನಪಾಲ ಎ.ಶೆಟ್ಟಿ ಪದವಿ ಪೂರ್ವ ಕಾಲೇಜಿನ 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಹೆಗ್ಗೇರಿ ಆಯುರ್ವೆದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತಕುಮಾರ, ವಿದ್ಯಾರ್ಥಿಗಳು ಶಿಸ್ತು ಅಳವಡಿಸಿಕೊಂಡು, ಸರಿಯಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನ ತಲುಪಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಆದಪ್ಪನವರ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಪರಿಶ್ರಮ ಪಡಬೇಕು, ತಾಳ್ಮೆಯಿಂದ ವರ್ತಿಸಬೇಕು. ಆಶಾವಾದಿಗಳಾಗಿ ಬದುಕಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು, ಸಂಸ್ಕಾರವಂತಿಕೆ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ತಿಳಿಸಿದರು.

ಬಿ.ಟಿ. ರಾಜಮಾನೆ, ಆರ್.ಟಿ. ಅಣ್ಣಿಗೇರಿ, ಆರ್.ಟಿ. ತವನಪ್ಪವರ, ಎ.ಸಿ. ಬೀಳಗಿ, ಎನ್.ಜೆ. ಗೌಡ, ಪ್ರಾಚಾರ್ಯ ಲೋಹಿತ ಸಜ್ಜನ, ಡಾ. ಸುಜಾತಾ ಎನ್., ಹರ್ಷ ಆದಪ್ಪನವರ, ತುಕಾರಾಮ ಗೋಂದಳೆ, ಅಭಿಷೇಕ ಹಂಡಗಿ, ಸಂಪತ ಮಠದ, ವಿಶ್ವ ವಿನಾಯಕ, ಹೇಮಾವತಿ ವಿ., ಅನಿತಾ ಕೊನೆರಿ, ಜಯಶ್ರೀ ಮುಗಳಿ, ಭಾಗ್ಯಶ್ರೀ ಆನಂದ, ಜಿ.ಜಿ. ಲೋಬೋಗೋಳ, ಲಕ್ಷ್ಮೀ ಗುರವ, ಪದ್ಮಾ ದಯಣ್ಣವರ, ಸಂದೇಶ ಅಣ್ಣಿಗೇರಿ, ವಿದ್ಯಾರ್ಥಿನಿಯರ ಪ್ರತಿನಿಧಿ ದಾವಲಬಿ ಗಂಜಿ, ವಿದ್ಯಾರ್ಥಿ ಪ್ರತಿನಿಧಿ ಭರತ ಕೆ. ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net