ಭಗವಾನ ಮಹಾವೀರ ಜಯಂತಿ ಆಚರಣೆ

KSRTC photo -1
Published on

ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ರವಿವಾರ ಭಗವಾನ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಉಗ್ರಾಣ ಮತ್ತು ಖರೀದಿ ನಿಯಂತ್ರಕರಾದ ಐ ಎ ಕಂದಗಲ್ ಅವರು ಮಾತನಾಡಿ ಜೈನಧರ್ಮದ 24ನೇ ತೀರ್ಥಂಕರರಾದ ಭಗವಾನ ಮಹಾವೀರ ಅವರು ಅಹಿಂಸೆಯನ್ನು ಬೋಧಿಸಿದರು. ಬದುಕಿರಿ ಮತ್ತು ಬದುಕಲು ಬೀಡಿ ಎಂಬ ತತ್ವದ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶಗಳನ್ನು ನೀಡಿದ್ದಾರೆ ಎಂದು ನುಡಿದರು.

 ಕಾರ್ಯಕ್ರಮದಲ್ಲಿ  ಸಿಬ್ಬಂದಿಗಳಾದ ಅರುಣ ಮೂಶನ್ನವರ, ವಿ ಎಫ್ ಬಿಜಾಪೂರ, ರಾಜು ಮಹೇಂದ್ರಕರ, ವರ್ಷಾ ಜಾಧವ, ನಾಗರಾಜ ಹಬ್ಬು, ವಿಜಯಕುಮಾರ ಕಂಬಾರ, ಶಿವು ಬೆಂಡಿಗೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net