

ಹುಬ್ಬಳ್ಳಿ: ಪಾಂಡವರು ತಮ್ಮ ಆಯುಧಗಳನ್ನು ಬನ್ನಿ ಗಿಡದಲ್ಲಿ ಬಚ್ಚಿಟ್ಟು ವನವಾಸದ ನಂತರ ಅದೇ ಆಯುಧಗಳೊಂದಿಗೆ ಮಹಾಭಾರತದ 18 ದಿನಗಳ ಯುದ್ದವನ್ನು ಗೆದ್ದು ಬೀಗಿದ ವಿಜಯದ ಸಂಕೇತವೇ ಆಯುಧ ಪೂಜೆ ಎಂದು ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ಹೇಳಿದರು.
ಇಲ್ಲಿಯ ರಾಜನಗರದ ಛೇಡಾ ಐಟಿಐ ಕಾಲೇಜಿನಲ್ಲಿ ಮಹಾನವಮಿ ನಿಮಿತ್ತ ಏರ್ಪಡಿಸಿದ್ದ ಆಯುಧ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ತನ್ನಲ್ಲಿರುವ ದುರ್ಗುಣಗಳನ್ನು ಕಳೆದು ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ವಿವಿಧ ವಿಭಾಗಗಳ ಆಯುಧ ಪೂಜೆ ನೆರವೇರಿಸಲಾಯಿತು.
ಮಹಾವೀರ ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷ ಆರ್.ಟಿ. ತವನಪ್ಪನವರ, ಬಿ.ಟಿ. ರಾಜಮಾನೆ, ಪ್ರಾಚಾರ್ಯ ಆರ್.ಬಿ. ಸಾಬಣ್ಣವರ, ಸಿ.ಜಿ. ಪತ್ರಾವಳಿ, ಎಂ.ಕೆ. ಲಿಂಬಿಕಾಯಿ, ವಿ.ವಿ. ಮೇಲ್ಮುರಿ, ಜಾಕೋಬ ಡೊಕ್ಕಾ, ಮಹಾಂತೇಶ ಹೂಗಾರ, ಆರ್.ಎನ್. ಅಪ್ಪಣ್ಣವರ, ಎಸ್.ಜೆ. ಹಿರೇಮಠ, ವಿ.ಡಿ. ಧರಣೆಪ್ಪನವರ, ವಿಜಯಲಕ್ಷಿ$್ಮ ಮಂದವಾಡಿ, ಎಸ್.ಆರ್. ನೀರಾವರಿ ಇತರರು ಪಾಲ್ಗೊಂಡಿದ್ದರು.
ಆರ್.ಎನ್. ಕೋಟಿ ಕಾರ್ಯಕ್ರಮ ನಿರೂಪಿಸಿದರು. ಗುರುಸಿದ್ದಪ್ಪ ಬಡಿಗೇರ ಸ್ವಾಗತಿಸಿದರು.