ಮಹಾತ್ಮರ ಆದರ್ಶ ಅಳವಡಿಸಿಕೊಳ್ಳಬೇಕು

nra
ಕಳಸ ತಾಲೂಕು ಕಚೇರಿಯಲ್ಲಿ ನಾರಾಯಣಗುರು ಜಯಂತಿ ಹಾಗೂ ನುಲಿಯ ಚಂದಯ್ಯ ಜನ್ಮದಿನ ಆಚರಿಸಲಾಯಿತು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ, ಎಂ.ಎ.ಶೇಷಗಿರಿ, ರಾಮಚಂದ್ರ, ಪೂರ್ಣಿಮಾ, ಚಂದ್ರಶೇಖರ ಇತರರಿದ್ದರು.
Published on

ಕಳಸ: ಆದರ್ಶ ಪುರುಷರ ತತ್ವ, ಸಿದ್ಧಾಂತಗಳ ಬಗ್ಗೆ ಮಾತನಾಡಿದರೆ ಸಾಲದು, ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಕಳಸ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಗುರುವಾರ ನಾರಾಯಣಗುರು ಜಯಂತಿ ಹಾಗೂ ನುಲಿಯ ಚಂದಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾರಾಯಣಗುರು ಒಂದು ಸಮುದಾಯಕ್ಕೆ ಸೀಮಿತರಾಗಿರಲಿಲ್ಲ. ಆದರ್ಶಗಳನ್ನು ಪಾಲಿಸಿಕೊಂಡು ಎಲ್ಲ ಸಮುದಾಯದವರನ್ನೂ ಸಮಾನ ರೀತಿಯಲ್ಲಿ ನೋಡುತ್ತಿದ್ದರು. ಅವರಂತೆ ನಾವೂ ತತ್ವ, ಸಿದ್ಧಾಂತದೊಂದಿಗೆ ಬದುಕಬೇಕು ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ ಮಾತನಾಡಿ, ನಾರಾಯಣ ಗುರುಗಳು ಸಮಾಜದಲ್ಲಿದ ಕೆಟ್ಟ ಪದ್ಧತಿಗಳನ್ನು ವಿರೋಧ ಮಾಡಿ ಸುಧಾರಣೆ ಮಾಡಿದ್ದರು. ನಾವು ಸ್ವಾಭಿಮಾನ, ಗೌರವಯುತವಾಗಿ ಬದುಕಲು ನಾರಾಯಣಗುರುಗಳಂಥ ಮಹಾತ್ಮರೇ ಕಾರಣ. ಮಾನವ ಕುಲಕ್ಕೆ ಒಂದೇ ಜಾತಿ ಒಂದೇ ದೇವರು ಎಂಬ ತತ್ವ ಕಲಿಸಿದ್ದಾರೆ ಎಂದರು.
ತಹಸೀಲ್ದಾರ್ ಮಂಜುನಾಥ್, ಬಿಲ್ಲವ ಸಂಘದ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ರವಿ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಕಿಶೋರ್, ಸಂಘಟನಾ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ಚಂದ್ರಶೇಖರ, ಕಾಂಗ್ರೆಸ್ ಮುಖಂಡ ಮಹಮ್ಮದ್ ರಫೀಕ್, ಪಪಂ ಸದಸ್ಯ ವೀರೇಂದ್ರ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net