ಸರ್ವ ಕಾರ್ಯಕ್ಕೂ ಮಹಾತ್ಮರ ಆಶೀರ್ವಾದ ಅಗತ್ಯ

HKP
Published on

ನರೇಗಲ್ಲ: ನಮ್ಮ ಜೀವನ ಸುಖಮಯವಾಗಿ ಸಾಗಬೇಕಾದರೆ ನಮಗೆ ಸಂತರ, ಶರಣರ, ಮಹಾತ್ಮರ ಆಶೀರ್ವಾದ ಬೇಕು. ಮಹಾತ್ಮರ ಕೃಪೆಯಿಲ್ಲದೆ ಯಾವ ಕಾರ್ಯವೂ ಸಾಧ್ಯವಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರಮಠದಲ್ಲಿ ಬುಧವಾರ ಏರ್ಪಡಿಸಿದ್ದ ಪುಣ್ಯಾರಾಧನೆಯ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀವೀರಪ್ಪಜ್ಜನವರ ಮಠದಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲ ಎಂಬುದನ್ನು ತಿಳಿದು ತುಂಬಾ ಸಂತೋಷವಾಯಿತು. ಇಂತಹ ಮಠಗಳಿಂದಲೆ ನಮ್ಮಲ್ಲಿ ಇನ್ನೂ ಸಾಮರಸ್ಯ ಉಳಿದುಕೊಂಡಿದೆ. ವೀರಪ್ಪಜ್ಜನವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ಅವರ ನುಡಿಗಳಲ್ಲಿ ಅಷ್ಟೊಂದು ಅರ್ಥ ಮತ್ತು ಶಕ್ತಿ ಇದೆ. ಇಲ್ಲಿನ ಅಬ್ಬಿಗೇರಿ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಗುಡಿಯಲ್ಲಿ ಶ್ರೀ ವೀರಪ್ಪಜ್ಜನವರು ಕೆಲಕಾಲ ವಾಸವಾಗಿದ್ದರು. ಶ್ರೀ ವೀರಪ್ಪಜ್ಜನವರು ವಾಸಿಸಿದ್ದ ಈ ದೇವಸ್ಥಾನವನ್ನು ಸರ್ಕಾರದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಶ್ರೀವೀರಪ್ಪಜ್ಜನವರನ್ನು ಹುಚ್ಚೀರಪ್ಪಜ್ಜ ಎಂದು ಕರೆಯುವುದನ್ನು ಇಂದಿನಿಂದ ಬಿಡುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದರು.

ಶಾಸಕ ಜಿ.ಎಸ್. ಪಾಟೀಲ ಪುಣ್ಯಾರಾಧನೆಯ ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಅಬ್ಬಿಗೇರಿ ಹಿರೇಮಠದ ಶ್ರೀವೀರಭದ್ರ ಶಿವಾಚಾರ್ಯರು, ಡಾ. ವಿಶ್ವನಾಥ ಸ್ವಾಮೀಜಿ, ಟಿ. ಈಶ್ವರ, ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನಮಠ, ಮಿಥುನ ಪಾಟೀಲ, ಡಾ. ಕೆ.ಬಿ. ಧನ್ನೂರ, ಬಸವರಾಜ ಜಾಲೀಹಾಳ, ದಿಲೀಪ ಮುಗಳಿ ಇತರರಿದ್ದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ, ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಶಿವನಗೌಡ ಪಾಟೀಲ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net