

ಸಿರಿಗೆರೆ: ಆಧ್ಯಾತ್ಮ, ದಾರ್ಶನಿಕ ಜೀವನದ ಅತ್ಯಮೂಲ್ಯ ಅಂಶಗಳನ್ನು ಅನುಷ್ಠಾನದ ರೂಪಕ್ಕೆ ತಂದವರು ಗಾಂಧೀಜಿ ಎಂದು ಇತಿಹಾಸ ಉಪನ್ಯಾಸಕ ರಾಜಶೇಖರಯ್ಯ ಅಭಿಪ್ರಾಯಪಟ್ಟರು.
ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ತಮ್ಮ ಜೀವನದ ಮೂಲಕ ಜಗತ್ತಿಗೆ ಆಧ್ಯಾತ್ಮ ದರ್ಶನವನ್ನು ನೀಡುತ್ತಿರುವ ಆಧ್ಯಾತ್ಮ ಜೀವಿ ಎಂದರೆ ಗಾಂಧೀಜಿ ಎಂದರು.
ಸತ್ಯಾಗ್ರಹದ ಮೂಲಕ ಇಡೀ ವಿಶ್ವವನ್ನೇ ವ್ಯಾಪಿಸಿ ಅನೇಕ ನಾಯಕರ ಜೀವನ ಜ್ಯೋತಿಯಾಗಿ ಗಾಂಧೀಜಿ ಆಧ್ಯಾತ್ಮ ಮಾರ್ಗ ತೋರಿಸಿದ ವಿಶ್ವಗುರು ಎಂದು ಬಣ್ಣಿಸಿದರು.
ಪ್ರಾಚಾರ್ಯ ಶಿವನಗೌಡ ಕೆ. ಸುರಕೋಡ ಮಾತನಾಡಿ, ಅಸ್ಪೃಶ್ಯತೆ ನಿವಾರಣೆ, ಹರಿಜನೋದ್ಧಾರ ಹಾಗೂ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕ ಗಾಂಧೀಜಿ ಎಂದರು.
ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ನಾಗವೇಣಿ, ನಯನಾ ಗಾಂಧೀಜಿ ವಿಚಾರಧಾರೆಗಳ ಕುರಿತು ಮಾತನಾಡಿದರು.
ಕೆ.ಎನ್.ನಟರಾಜ್, ವಿಶ್ವಕುಮಾರ್, ಪ್ರಕಾಶ್ ಬಣಕಾರ್ , ಪ್ರಿಯಾಂಕಾ, ಚಂದ್ರಶೇಖರಪ್ಪ ಇದ್ದರು. ಗಣಕ ವಿಜ್ಞಾನ ಸಂಯೋಜನೆಯ ಬೇಬಿ ನಿರೂಪಿಸಿದರು. ಮಮತಾ ಸ್ವಾಗತಿಸಿದರು.