ಮಹಾತ್ಮರ ಉಪದೇಶ ಅರಿಯಲಿ

web4
ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿ ಮಠದಲ್ಲಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ನಿರ್ವಾಣೇಶ್ವರ ಮಠದ ಶ್ರೀಗುರುಮಹಾಂತ ದೇವರು ಚಾಲನೆ ನೀಡಿದರು. ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಿ.ಆರ್. ಹಿರೇಮಠ ಇತರರಿದ್ದರು.
Published on

ಉಗರಗೋಳ: ಗುರುಗಳು ಅಂತರಾಳದ ಅನುಭವಗಳನ್ನು ಶಿಷ್ಯರಿಗೆ ಧಾರೆ ಎರೆದಾಗ ಮಾತ್ರ ಶಿಷ್ಯರು ದೀಪದ ಬೆಳಕಿನಂತೆ ಪ್ರಜ್ವಲಿಸಿ ನಾಡಿನ ಕತ್ತಲೆಯನ್ನು ಹೊರದೂಡಲು ಸಾಧ್ಯ ಎಂದು ಹೂಲಿ ಸಾಂಬಯ್ಯನವರಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀಗುರು ಶಿವಪ್ಪಯ್ಯ ಶಿವಯೋಗಿ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಮಹಾತ್ಮರ ಉಪದೇಶವನ್ನು ಪರಿಪಾಲನೆ ಮಾಡಿದಲ್ಲಿ ಬಾಳ ಬಂಡಿ ಸುಗಮವಾಗಿ ಸಾಗುತ್ತದೆ ಎಂದರು.

ಉಗರಗೋಳದ ಶ್ರೀ ನಿರ್ವಾಣೇಶ್ವರ ಮಠದ ಗುರುಮಹಾಂತ ದೇವರು ಮಾತನಾಡಿ, ಮಾನವ ಪ್ರತಿದಿನ ದೇವರ
ನಾಮಸ್ಮರಣೆ ಮಾಡಿದಲ್ಲಿ ಆತ್ಮಜ್ಞಾನಿಯಾಗಿ ದೀಪದಂತೆ ಪ್ರಜ್ವಲಿಸುತ್ತಾನೆ ಎಂದರು.
ನಿವೃತ್ತ ಎಸಿಪಿ ಜಿ.ಆರ್. ಹಿರೇಮಠ, ಕೆಎಎಸ್ ಅಧಿಕಾರಿ ಎಂ.ಆರ್. ಹಿರೇಮಠ, ಶ್ರೀಗುರು ಸಿದ್ಧಯ್ಯ ಶ್ರೀ, ಶಂಕ್ರಯ್ಯ ಶ್ರೀಗಳು, ಬಸಯ್ಯ ಹಿರೇಮಠ, ಬಸನಗೌಡ ಪಾಟೀಲ, ವೈ.ಆರ್. ಚನ್ನಪ್ಪಗೌಡ್ರ, ಸಿದ್ದನಗೌಡ ಗೂಡ್ರಾಶಿ, ಎಸ್‌ಪಿ. ನರಗುಂದ, ಎಸ್.ಎಲ್. ಅಂಗಡಿ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ, ಪುಂಡಲೀಕ ಬಾಳೋಜಿ, ಸುಧೀರ ದೊಡಮನಿ, ಆರ್‌ಪಿ ಪವಾರ, ಯಲ್ಲಮ್ಮ ಗಂದಿಗವಾಡ, ಮೈತ್ರಾದೇವಿ ವಸದ, ಬಿ.ಕೆ. ಪಾಟೀಲ, ಐ.ಪಿ. ಪಾಟೀಲ, ಆನಂದ ಭೂವಿ, ಜಿ.ಬಿ. ಮಠದ, ಎಂ.ಎಲ್. ಮೇಲತ್ತಿ, ಬಿ.ಕೆ. ಪಾಟೀಲ, ರಾಜಶೇಖರ ಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net