

ವಿಜಯಪುರ: ನುಡಿದಂತೆ ನಡೆದ ಮಹಾತ್ಮರು ಲಿಂ. ಸಿದ್ಧೇಶ್ವರ ಶ್ರೀಗಳು. ಪೂಜ್ಯರ ಬದುಕು ನಮಗೆಲ್ಲ ಆದರ್ಶ ಎಂದು ಪಂಡಿತ ಮಧ್ವಾಚಾರ್ಯ ಮೊಕಾಶಿ ಹೇಳಿದರು.
ನಗರದ ಚೇತನಾ ಶಿಕ್ಷಣ ಸಂಸ್ಥೆಯಲ್ಲಿ ಚಿಂತಕರ ಚಾವಡಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಾಸಿಕ ಕಾರ್ಯಕ್ರಮದಲ್ಲಿ ಲಿಂ. ಸಿದ್ಧೇಶ್ವರ ಶ್ರೀಗಳಿಗೆ ಅವರು ನುಡಿನಮನ ಸಲ್ಲಿಸಿದರು.
ಜಗತ್ತಿನಲ್ಲಿ ಅನೇಕರು ದೊಡ್ಡವರಾಗುತ್ತಾರೆ. ಆದರೆ ಅವರು ತಮ್ಮ ಮನಸ್ಸಿನಲ್ಲಿಯೋ, ಮಾತಿನಲ್ಲಿಯೋ ಅಥವಾ ಕ್ರಿಯೆಯಲ್ಲಿಯೋ ಒಂದಕ್ಕೊಂದು ಸಂಬಂಧ ಇರದ ಹಾಗೆ ವರ್ತಿಸುತ್ತಾರೆ. ಸ್ವಲ್ಪ ಸಮಯ ದೊಡ್ಡವರೆನಿಸಿಕೊಂಡು ನಂತರ ಎಡವಿ ಬೀಳುತ್ತಾರೆ. ಆದರೆ, ಸಿದ್ಧೇಶ್ವರ ಶ್ರೀಗಳು ಮಾತ್ರ ನುಡಿದಂತೆ ನಡೆಯುವ ಮೂಲಕ ನಡೆದಾಡುವ ದೇವರೆನ್ನಿಸಿಕೊಂಡರೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ಡಿ. 23ರಿಂದ 2024, ಜ. 2ರವರೆಗೆ ನಡೆಯುವ ನುಡಿನಮನ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತೆ ಆಮಂತ್ರಣವನ್ನಿತ್ತರು.
ಉದ್ಯಮಿ ಶಾಂತೇಶ ಕಳಸಗೊಂಡ, ವಿಪ ಮಾಜಿ ಸದಸ್ಯ ಅರುಣ ಶಹಪೂರ, ವೇದಾಂತ ಬಿಸಿಎ, ಬಿಕಾಂ ಕಾಲೇಜಿನ ಅಧ್ಯಕ್ಷ ಶಾಂತವೀರಯ್ಯ ಮಠ, ಖ್ಯಾತ ವೈದ್ಯ ಡಾ. ಬಾಬು ರಾಜೇಂದ್ರ ನಾಯಿಕ, ಮಯೂರ ಸಜ್ಜನ, ಚೇತನಾ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ದಯಾನಂದ ಜುಗತಿ ಮಾತನಾಡಿದರು.
ಮಂಥನ ಸಂಯೋಜಕ ಈರಣ್ಣ ಬಿರಾದಾರ, ಶ್ರೀಧರ ಪಾರಶೆಟ್ಟಿ, ಬಸವರಾಜ ದಂಡೋತಿ, ಮನೀಷಾ ಕುಲಕರ್ಣಿ, ಭುವನೇಶ್ವರಿ ಕೋರವಾರ, ದಾಕ್ಷಾಯಣಿ ಹೀರಾಪೂರ, ಗೋಪಾಲ ದೇಶಪಾಂಡೆ, ಎ.ಜಿ. ಢವಳಗಿಮಠ, ಎಚ್.ಎಸ್. ಗಿಡ್ಡನ್ನವರ, ವಿಜಯಕುಮಾರ ಬೆಳುಂಡಗಿ ಮತ್ತಿತರರಿದ್ದರು.
ಮಲ್ಲಿಕಾರ್ಜುನ ಕೆಂಗನಾಳ ನಿರೂಪಿಸಿದರು. ಸ್ವರ್ಣಿಮಾ ಗುಡೂರ ಪ್ರಾರ್ಥಿಸಿದರು. ಪಿ.ಬಿ. ಕುಲಕರ್ಣಿ ಸ್ವಾಗತಿಸಿದರು. ಚನ್ನು ಹುಣಶ್ಯಾಳ ವಂದಿಸಿದರು. ಶೀಶೈಲ ಹುಟಗಿ ವಂದೇ ಮಾತರಂ ಪ್ರಸ್ತುತಪಡಿಸಿದರು.