ಮಹಾತ್ಮರ ಸ್ಮರಣೆ ಅವಶ್ಯ

26MNL1
Published on

ಮುನವಳ್ಳಿ: ಪಟ್ಟಣದ ಕುಸ್ತಿ ಮೆದಾನದಲ್ಲಿ ಗಣರಾಜ್ಯೋತ್ಸವವನ್ನು ಮಹಾತ್ಮ ಗಾಂಧೀಜಿ, ಡಾ. ಬಿ.ಆರ್​. ಅಂಬೇಡ್ಕರ್​ ಭಾವಚಿತ್ರಕ್ಕೆ ಭಾನುವಾರ ಪೂಜೆ ಸಲ್ಲಿಸಿ ಸಾರ್ವಜನಿಕ ಧ್ವಜಾರೋಹಣವನ್ನು ಪುರಸಭೆ ಅಧ್ಯ ಸಿ.ಬಿ.ಬಾಳಿ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸಂವಿಧಾನ ಜಾರಿಯಾಗಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ದಿನವೇ ಗಣರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ.ಗಣರಾಜ್ಯವಾಗಲು ಶ್ರಮಿಸಿದ ಮಹಾತ್ಮರ ನೆನೆಯುವ ದಿನ ಇದಾಗಿದೆ. ಮುನವಳ್ಳಿ ಪಟ್ಟಣವನ್ನು ಎಲ್ಲರ ಸಹಕಾರದಿಂದ ಪ್ರಗತಿಯತ್ತ ಒಯ್ಯೋಣ ಎಂದರು. ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಹಾಗೂ ದೇಶಭಕ್ತಿ ಗೀತೆಗೆ ಸಮೂಹ ನತ್ಯ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುರಸಭೆಯಿಂದ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಎಂ.ಎಂ. ತಿಮ್ಮಾಣಿ, ಪುರಸಭೆ ಸದಸ್ಯರು ಸಿಬ್ಬಂದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net