

ಗದಗ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧೀಜಿ ಅವರ 154ನೇ ಜಯಂತಿ ಅಂಗವಾಗಿ ಪ್ರೌಢಶಾಲೆ ವಿಭಾಗ/ ಪದವಿ ಪೂರ್ವ/ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನಕ್ಕೆ 3,000/- ದ್ವಿತೀಯ ಸ್ಥಾನಕ್ಕೆ 2,000/- ಹಾಗೂ ತೃತೀಯ ಸ್ಥಾನಕ್ಕೆ 1,000 ರೂ.ಗಳ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ವಿತರಿಸಿದರು.
ಪ್ರೌಢಶಾಲಾ ವಿಭಾಗದಲ್ಲಿ ವಿಜೇತರು: ಕು. ಶ್ರೇಯಾ ವೀರಣ್ಣ ಯಾವಗಲ್ ಪ್ರಥಮ ಸ್ಥಾನ , ಕು.ವಾಣಿ ಪ್ರಲ್ಹಾದ ಹೊಸಳ್ಳಿ ದ್ವಿತೀಯ ಸ್ಥಾನ, ಕು.ರೇಣುಕಾ ಉಮೇಶ ಗದಗ ತೃತೀಯ ಸ್ಥಾನ.
ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ವಿಜೇತರು:
ಅಂಜಲಿ ಕಿ. ಹಾವನೂರ ಪ್ರಥಮ ಸ್ಥಾನ, ವಿದ್ಯಾ ಶಿ ಗಡ್ಡದ ದ್ವೀತೀಯ ಸ್ಥಾನ, ಗೌರಮ್ಮ ಎಸ್ ಹೊಸಳ್ಳಿ ತೃತೀಯ ಸ್ಥಾನ.
ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ವಿಜೇತರು: ಈರಮ್ಮ ಕುಂದಗೋಳ ಪ್ರಥಮ ಸ್ಥಾನ, ಚಂದ್ರಗೌಡ ಹನಮಂತಗೌಡ ದ್ವಿತೀಯ ಸ್ಥಾನ ಹಾಗೂ ಮಲ್ಲಿಕಾರ್ಜುನ ಪೂಜಾರ ತೃತೀಯ ಸ್ಥಾನ.