ಅ.11ರಂದು ಗಾಂಧಿಗ್ರಾಮದಲ್ಲಿ ಶ್ರಮದಾನ: ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿಕೆ

Mahatma Gandhi Service Award Mandya
Published on

ಮಂಡ್ಯ: ಮಹಾತ್ಮಗಾಂಧಿ ತತ್ವ ಮತ್ತು ಆದರ್ಶದಡಿ ಅ.11ರಂದು ತಾಲೂಕಿನ ಎಚ್.ಮಲ್ಲಿಗೆರೆಯಲ್ಲಿರುವ ಗಾಂಧಿಗ್ರಾಮದಲ್ಲಿ ಶ್ರಮಧಾನ ಅಭಿಯಾನ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ನಗರದ ಗಾಂಧಿಭವನದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಜಯಂತಿಯಂದೇ ಶ್ರಮದಾನ ನಡಿಬೇಕಿತ್ತು. ಆದರೆ ವಿಜಯದಶಮಿ ಹಬ್ಬ ಕಾರಣ ಮುಂದೂಡಲಾಗಿದೆ. 11ರಂದು ಸುಮಾರು 2 ಸಾವಿರ ಜನರೊಂದಿಗೆ ಶ್ರಮದಾನ ಅಭಿಯಾನ ನಡೆಸಲಾಗುವುದು. ಆ ಮೂಲಕ ಗಾಂಧೀಜಿ ಅವರನ್ನು ಸ್ಮರಿಸೋಣ, ಅವರ ತತ್ವ ಸಿದ್ದಾಂತಗಳನ್ನು ಪ್ರಚಾರ ಪಡಿಯೋಣ ಎಂದರು.

ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಮಹಾತ್ಮ ಗಾಂಧೀಜಿ ಜಯಂತಿಯನ್ನು ವಿಶ್ವಸಂಸ್ಥೆ ವಿಶ್ವ ಅಹಿಂಸ ದಿನ ಎಂದು ಘೋಷಿಸಿದೆ. ಅದರಂತೆ 180ಕ್ಕೂ ಹೆಚ್ಚು ರಾಷ್ಟ್ರದಲ್ಲಿ ಗಾಂಧಿಜೀ ಅವರನ್ನು ಸ್ಮರಿಸಲಾಗುತ್ತಿದೆ. ಗಾಂಧಿಗ್ರಾಮಕ್ಕೆ ಪತ್ರಿ ವಾರ ಒಂದೊಂದು ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ದು ಸೇವಾ ಚಟುವಟಿಕೆ, ಗಾಂಧಿಜೀ ಅವರ ಸಂದೇಶಗಳ ಬಗ್ಗೆ ಅರಿವು ಹೆಚ್ಚಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.

ಪ್ರತಿಭಾಂಜಲಿ ಪ್ರೊ.ಡೇವಿಡ್, ಅಲೈ ಚಂದ್ರಶೇಖರ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಧನಂಜಯ ಧರಸಗುಪ್ಪೆ, ಡಾ.ಮರೀಗೌಡ, ಜಿ.ವಿ.ನಾಗರಾಜು, ಪ್ರೊ.ಶಿವಕುಮಾರ್, ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net