

ಧಾರವಾಡ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಖಾದಿ ಕ್ಷೇತ್ರದಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನೀಡುವ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಗೆ ಜಿಲ್ಲೆಯ ಗರಗ ಕ್ಷೇತ್ರೀಯ ಸಂಘ ಆಯ್ಕೆಯಾಗಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಜಿಲ್ಲಾಽಕಾರಿ ಗುರುದತ್ತ ಹೆಗಡೆ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಗರಗ ಕ್ಷೇತ್ರೀಯ ಸಂಘದ ಅಧ್ಯಕ್ಷರನ್ನು ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರ‍್ಯ ಆಂದೋಲನ, ರಾಷ್ಟ್ರೀಯ ಚಳವಳಿಗಳು ಮತ್ತು ಕರ್ನಾಟಕದ ಏಕೀಕರಣಕ್ಕೆ ಜಿಲ್ಲೆ ಅಪಾರ ಕೊಡುಗೆ ನೀಡಿದೆ. ವಿಶೇಷವಾಗಿ ಖಾದಿ ಉದ್ಯಮ, ಖಾದಿ ಚಳವಳಿಗೆ ಬೆನ್ನೆಲುಬಾಗಿ ನಿಂತಿದೆ. ಗರಗ ಕ್ಷೇತ್ರೀಯ ಸಂಘ ಮತ್ತು ಹುಬ್ಬಳ್ಳಿಯ ಬೆಂಗೇರಿ ಖಾದಿ ಕೇಂದ್ರಗಳು ಜಿಲ್ಲೆಯ ಕೀರ್ತಿಯನ್ನು ರಾಷ್ಟç ಮಟ್ಟಕ್ಕೆ ಎತ್ತರಿಸಿವೆ ಎಂದರು.
ಜಿಲ್ಲಾಡಳಿತವು ಖಾದಿ ರಾಷ್ಟಧ್ವಜಗಳನ್ನು ಖರೀದಿಸಿ ಸ್ಮರಣಿಕೆ ಮಾಡಿ ವಿತರಿಸುವ ಮೂಲಕ ಖಾದಿ ಕ್ಷೇತ್ರದಲ್ಲಿನ ಸಂಘಗಳನ್ನು ಪ್ರೋತ್ಸಾಹಿಸುತ್ತಿದೆ. ಪ್ರತಿಯೊಬ್ಬರೂ ಖಾದಿ ಬಟ್ಟೆ ಖರೀದಿಸುವ ಮೂಲಕ ಖಾದಿ ಉತ್ಪಾದನಾ ಕ್ಷೇತ್ರಕ್ಕೆ ಬೆಂಬಲ ನೀಡಬೇಕು ಎಂದರು.
ಗರಗ ಕ್ಷೇತ್ರೀಯ ಸಂಘದ ಅಧ್ಯಕ್ಷ ಬಸವಪ್ರಭು ಹೊಸಕೇರಿ ಗೌರವ ಸ್ವೀಕರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ., ಜಿಲ್ಲಾ ಖಾದಿ ಮತ್ತು ಗ್ರಾಮದ್ಯೋಗ ಅಽಕಾರಿ ನಾಗನಗೌಡ ನೆಗಳೂರ, ಸಹಾಯಕ ವಾರ್ತಾಽಕಾರಿ ಡಾ. ಸುರೇಶ ಹಿರೇಮಠ ಇದ್ದರು.