ಜಗತ್ತು ಕಂಡ ಮಹಾನ್ ನಾಯಕ

MUL 1
Published on

ಮುಳಗುಂದ: ಜಗತ್ತು ಕಂಡ ಮಹಾನ್ ನಾಯಕ ಮಹಾತ್ಮ ಗಾಂಧೀಜಿ. ಜನರ ಮನಸು ಬದಲಿಸಿದ ಮುತ್ಸದ್ಧಿ. ಶಾಂತಿ ಮಂತ್ರದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಅಭಿಪ್ರಾಯಪಟ್ಟರು.

ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಸ್ವಾವಲಂಬಿ ಜೀವನದ ಪರಿಕಲ್ಪನೆ ಕೊಟ್ಟವರು. ಶಾಸ್ತ್ರಿ ಅವರು ಸರಳ, ಪ್ರಾಮಾಣಿಕ ರಾಜಕಾರಣಿಯಾಗಿದ್ದರು ಎಂದರು. ಇಂಜಿನಿಯರ್ ಉಮೇಶಗೌಡ ಓಜನಳ್ಳಿ, ಎಂ.ಸಿ. ಸಜ್ಜನ, ಉಮಾ ಗದಗಿನ, ಬಸವರಾಜ ಹೊರಪೇಟಿ, ಮಂಜುನಾಥ ಕರಿಗೂಳಪ್ಪನವರ, ರೇಖಾ ಹೊಸಮನಿ, ಬಸವಣ್ಣೆಪ್ಪ ಕವಲೂರ, ಮುನೀರ ನದ್ದೀಮುಲ್ಲಾ, ನೀಲಪ್ಪ ದೊಡಮನಿ, ಹನುಮಂತ ಕೆಳಗೇರಿ, ಎಂ.ಡಿ. ಬಳ್ಳಾರಿ, ಎಚ್.ಎಸ್. ಗೌಡ್ರ, ಕಂದಾಯ ನಿರೀಕ್ಷಕ ಇಮಾಮ್ ಕಾಲನಾಯ್ಕರ, ಇತರರಿದ್ದರು. ಸಮುದಾಯಾಧಿಕಾರಿ ವಾಣಿಶ್ರೀ ನಿರಂಜನ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net