ಮಹಾತ್ಮ ಗಾಂಧಿ ವಿಶ್ವ ನಾಯಕ

Mahatma Gandhi is a world leader
ವಿಜಯಪುರ ಮಹಾತ್ಮ ಗಾಂಧಿ ಭವನದಲ್ಲಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮಾತನಾಡಿದರು. ಎಸ್​ಪಿ ಲಕ್ಷ$್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾರತದ ಮಣ್ಣಿನಲ್ಲಿ ಜನಿಸಿದ್ದರೂ ಅವರ ತತ್ವ, ಸಿದ್ಧಾಂತ ಹಾಗೂ ಪ್ರತಿಪಾದಿಸಿದ ಮೌಲ್ಯಗಳಿಂದಾಗಿ ಅವರು ಇಡೀ ವಿಶ್ವಕ್ಕೆ ನಾಯಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್​ ಹೇಳಿದರು.

ನಗರದ ಜಿ.ಪಂ. ರಸ್ತೆಯ ಮಹಾತ್ಮ ಗಾಂಧಿ ಭವನದಲ್ಲಿ (ಹುತಾತ್ಮರ ದಿನಾಚರಣೆ) ಸವೋರ್ದಯ ದಿನದ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಅಮೆರಿಕದ ಡಾ. ಮಾರ್ಟಿನ್​ ಲೂಥರ್​ ಕಿಂಗ್​ ಜ್ಯೂನಿಯರ್​, ದಕ್ಷಿಣ ಆಫ್ರಿಕಾದ ನೆಲ್ಸನ್​ ಮಂಡೇಲಾ, ಬರ್ಮಾ ದೇಶದ ಆಂಗ್​ ಸಾನ್​ ಸೂಕಿ ಹೀಗೆ ಜಗತ್ತಿನ ನೂರಾರು ನಾಯಕರಿಗೆ ಗಾಂಧಿ ಸ್ಫೂರ್ತಿಯಾಗಿದ್ದಾರೆ ಎಂದರು.

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಮಹಾತ್ಮರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಸ್ಪಿ ಲಕ್ಷ$್ಮಣ ನಿಂಬರಗಿ ಮಾತನಾಡಿ, ಮಹಾತ್ಮ ಗಾಂಧೀಜಿ ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನ ನಿತ್ಯವೂ ಸ್ಮರಿಸುವಂತದ್ದು ಎಂದರು.

ಸೈನಿಕ ಶಾಲೆ ಪ್ರಾಚಾರ್ಯ (ಗ್ರೂಪ್​ ಕ್ಯಾಪ್ಟನ್​) ಪ್ರತಿಭಾ ಬಿಸ್ಟ್​ ಮಾತನಾಡಿದರು. ಸರ್ಕಾರಿ ಮಹಿಳಾ ಪಿಯು ಕಾಲೇಜಿನ ಉಪನ್ಯಾಸಕ ರುದ್ರಯ್ಯ ವಿಶೇಷ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಖಾದಿ ಗ್ರಾಮೋದ್ಯೋಗ ಸಂದ ಅಧ್ಯಕ್ಷ ಬಾಪೂಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಂಧಿ ಭವನದ ನಿರ್ವಹಣಾ ಸಮಿತಿ ಸದಸ್ಯ ನೇತಾಜಿ ಗಾಂಧಿ ಸ್ವಾಗತಿಸಿ, ನಿರೂಪಿಸಿದರು. ಪೀಟರ್​ ಅಲೆಕ್ಸಾಂಡರ್​ ವಂದಿಸಿದರು.

ಖಾದಿ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎನ್​.ಡಿ. ಕಾಂಬಳೆ, ಪ್ರಶಾಂತ ಚನಗೊಂಡ, ಯಲ್ಲಪ್ಪ, ಬಾಳೂ ಜೇವೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net