ಕತ್ತಲೆ ಕೂಪವಾದ ಮಹಾತ್ಮ ಗಾಂಧಿ ವೃತ್ತ..!

Mahatma Gandhi Circle is a dark hole..!
ಗೊಳಸಂಗಿ ಗ್ರಾಮದ ಮಹಾತ್ಮಗಾಂಧಿ ವೃತ್ತ.
Published on

ಗೊಳಸಂಗಿ: ಹಾಡಹಗಲೇ ಇತ್ತೀಚೆಗೆ ಒಂದು ಲಕ್ಷ ರೂ. ಕಳ್ಳತನವಾದ ಗ್ರಾಮದ ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲವು ದಿನಗಳಿಂದ ರಾತ್ರಿ ವೇಳೆ ಕಗ್ಗತ್ತಲು ಆವರಿಸಿದ್ದು, ಜನತೆ ಕತ್ತಲಲ್ಲೇ ಸಂಚರಿಸುವಂತಾಗಿದ್ದು, ಗ್ರಾ.ಪಂ. ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಜನದಟ್ಟಣೆ ಸ್ಥಳವಾಗಿರುವ ಮಹಾತ್ಮಗಾಂಧಿ ವೃತ್ತದ ಅಕ್ಕಪಕ್ಕದಲ್ಲಿನ ಹೈಮಾಸ್ಟ್ ದೀಪ, ಸೋಲಾರ್ ಲೈಟ್‌ಗಳು ಕಳೆದ ಎರಡು ವಾರಗಳಿಂದ ತಾಂತ್ರಿಕ ತೊಂದರೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ ಸೋಲಾರ ಲೈಟ್‌ಗಳೂ ಉರಿಯುತ್ತಿಲ್ಲ.

ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು, ವ್ಯಾಪಾರಿಗಳು, ಗ್ರಾಮಸ್ಥರಿಗೆ ಇದರಿಂದ ತೊಂದರೆಯಾಗುತ್ತಿದೆ. ಬೀದಿ ದೀಪದ ಸಮರ್ಪಕ ನಿರ್ವಹಣೆ ಮಾಡಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮೌನಕ್ಕೆ ಶರಣಾಗಿದೆ.

ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಶಂಕರಲಿಂಗ ಕಲಾದಗಿ ಇತರರು ಒತ್ತಾಯಿಸಿದ್ದಾರೆ.

ಮಹಾತ್ಮಗಾಂಧಿ ವೃತ್ತದಲ್ಲಿ ಬೆಳಕಿನ ವ್ಯವಸ್ಥೆಯಲ್ಲಿ ತಾತ್ಕಾಲಿಕ ತೊಂದರೆ ಉಂಟಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಶೀಘ್ರದಲ್ಲೇ ಎಲ್ಲ ವಿದ್ಯುತ್ ದೀಪಗಳು ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗುವುದು.
ಮಲ್ಲಿಕಾರ್ಜುನ ಹಾವರಗಿ, ಪಿಡಿಒ, ಗೊಳಸಂಗಿ ಗ್ರಾಮ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net