

ಮಂಗಳೂರು : ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ಗೆ ಕಾರ್ಪೊರೇಟ್ ಪರಿಸರ ಶ್ರೇಷ್ಠತೆಗಾಗಿ 2024ರ ಮಹಾತ್ಮ ಪ್ರಶಸ್ತಿ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ, ಜೀವವೈವಿಧ್ಯ ಅಭಿವೃದ್ಧಿ, ಹಸಿರು ಪಟ್ಟಿಗಳ ರಚನೆ , ಹಸಿರು ಉಪಕ್ರಮ, ಪರಿಸರ ಸುಸ್ಥಿರತೆ ಮತ್ತು ಸಮುದಾಯ ಕಲ್ಯಾಣಕ್ಕೆ ಎಂಆರ್‌ಪಿಎಲ್ ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಗಾಂಧಿವಾದಿ ಮತ್ತು ವಕೀಲ ಅಮಿತ್ ಸಚ್‌ದೇವ ಅವರು ಸ್ಥಾಪಿಸಿದ ಮಹಾತ್ಮ ಪ್ರಶಸ್ತಿಯು ಖಾಸಗಿ, ಸಾರ್ವಜನಿಕ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಾಮಾಜಿಕ ಪ್ರಭಾವದ ನಾಯಕರು ಮತ್ತು ಬದಲಾವಣೆ ಮಾಡುವವರಿಗೆ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ.
ನವದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಎಂಆರ್‌ಪಿಎಲ್ ಪರವಾಗಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ್.ಟಿ, ಸಹಾಯಕ ವ್ಯವಸ್ಥಾಪಕಿ ಅರ್ಪಿತ್ ಗೌರ್ ,ಇಂಜಿನಿಯರ್ ಅಂಜಲಿ ರಾಘವನ್ ಪ್ರಶಸ್ತಿ ಸ್ವೀಕರಿಸಿದರು.
ಮಾಜಿ ಐಪಿಎಸ್ ಅಧಿಕಾರಿ ಡಾ.ಕಿರಣ್ಬೇಡಿ ಮತ್ತು ಪ್ರಶಸ್ತಿಯ ಸಂಸ್ಥಾಪಕಿ ಅಮಿತ್ ಸಚ್‌ದೇವ ಪ್ರಶಸ್ತಿ ಪ್ರದಾನ ಮಾಡಿದರು.
ಸುಧಾ ಮೂರ್ತಿ, ಡಾ. ಸೋನಾಲ್ ಮಾನ್‌ಸಿಂಗ್, ಜತಿನ್‌ದಾಸ್ , ಡಾ. ರಾಮಚಂದ್ರ ಗಲ್ಲಾ, ರಾತಿ ಫೋರ್ಬ್ಸ್, ಸ್ಮಿನು ಜಿಂದಾಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.