-É.೨೬ ರಿಂದ ಮಹಾಶಿವರಾತ್ರಿ ಮಹೋತ್ಸವ *ಮಹಾ ಶಿವರಾತ್ರಿ ನಿಮಿತ್ತ ಶಾಂತಿ ಯಾತ್ರೆ

SMITHA AKKA
SMITHA AKKA
Published on
 ರಾಯಚೂರು ಪ್ರಜಾಪಿತ ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ನಿಮಿತ್ತ  -É.೨೬ರಿಂದ ಮಾ.೨ರವರೆಗೆ ಮಹಾಶಿವರಾತ್ರಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ
ಮುಖ್ಯಸ್ಥೆ ಸ್ಮಿತಾ ಅಕ್ಕ ಹೇಳಿದರು.
ನಗರದ  ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ಯಾನ ಸಭಾಂಗಣದಲ್ಲಿ  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, -É.೨೬ರಂದು ಮಹಾಶಿವರಾತ್ರಿ ಉದ್ಘಾಟನಾ ಮಹೋತ್ಸವ ಜರುಗಲಿದೆ. ಬೆಳಿಗ್ಗೆ ೯ ಗಂಟೆಗೆ ವಿಶ್ವವಿದ್ಯಾಲಯದಲ್ಲಿ ಶಿವ ಧ್ವಜಾರೋಹಣ ನಡೆಯಲಿದ್ದು, ಸಂಜೆ ೪ ಗಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಶಾಂತಿಯಾತ್ರೆ ನಡೆಯಲಿದೆ. ನಂತರ ೬ ಗಂಟೆಗೆ ನಗರದ ಬಸವೇಶ್ವರ ವೃತ್ತದ ವಾಲ್ಕಟ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು, ಶಾಸಕರು, ಗಣ್ಯರು, ಅಽಕಾರಿಗಳು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಮಹಾಶಿವರಾತ್ರಿಯ ಆದ್ಯಾತ್ಮ ರಹಸ್ಯ ಎಂಬ ವಿಷಯದ ಪ್ರವಚನ ನಡೆಯಲಿದ್ದು, ನಂತರ ೮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
-É.೨೭ಕ್ಕೆ ಜ್ಞಾನ ಜಾಗೃತಿ ಮಹೋತ್ಸವ ನಡೆಯಲಿದ್ದು, ಅಭೌತಿಕ ಜ್ಞಾನದ ಮಹತ್ವ ಎಂಬ ವಿಷಯದ ಮೇಲೆ
ಪ್ರವಚನ ಇರಲಿದೆ. ಇದೇ ವೇಳೆ ಸಿಕ್ಷಣ ಸಂಸ್ಥೆಗಳ ಸಂಸ್ಥಾಪಕರಿಗೆ ಸನ್ಮಾನ ಕಾರ್ಯಕ್ರಮ, -É.೨೮ರಂದು ಒಳ್ಳೆಯ ಆರೋಗ್ಯಕ್ಕೆ ಒಳ್ಳೆಯ ಅಭ್ಯಾಸ ಎನ್ನುವ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ. ಈ ಬಾರಿ ವಿಶೇಷವಾಗಿ ವಾಲ್ಕಟ್ ಮೈದಾನದಲ್ಲಿ ೪೦ ಅಡಿ ಎತ್ತರದ ಶಿವಲಿಂಗದೊಳಗಡೆ, ಝಗಮಗಿಸುವ
ಭಾರತ, ಭಾರತದ ಒಳಗಡೆ ದ್ವಾದಶ ಜ್ಯೋತಿರ್ಲಿಂಗ ದರ್ಶನದ ಸ್ಥಳಗಳ ಮಾಹಿತಿಯಿರುವ ಬೃಹತ್ ಚಿತ್ರದ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ದರ್ಶನ ವ್ಯವಸ್ಥೆ ಸಂಜೆ ೫ ರಿಂದ ರಾತ್ರಿ ೧೦ರವರಗೆ ಪ್ರತಿದಿನ ಇರಲಿದೆ ಎಂದರು.
ಮಾ.೧ರAದು ಸದ್ಬಾವನಾ ಮಹೋತ್ಸವ ಕಾರ್ಯಕ್ರಮವಿದ್ದು, ಸರ್ವರ ಸಹಯೋಗದಿಂದ ಸುಖಮಯ
ಜಗತ್ತಿನ ನಿರ್ಮಾಣ ವಿಷಯದ ಕುರಿತು ಪ್ರವಚನ ನೀಡಲಾಗುವುದು. ಸಮಾಜ ಸೇವಾ ಸಂಸ್ಥೆಗಳ ಮುಖ್ಯಸ್ಥರಿಗೆ
ಸನ್ಮಾನಿಸಿ ಗೌರವಿಸಲಾಗುವುದು. ಮಾ.೨ರಂದು ಪರಿವರ್ತನಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ಸ್ವಪರಿವರ್ತನೆಯಿಂದ ವಿಸ್ವಪರಿವರ್ತನೆ ಎಂಬ ವಿಷಯದ ಕುರಿತು ಪ್ರವಚನ ನೀಡಲಾಗುವುದು. ವಿವಿಧ ಕಲಾ ತಂಡಗಳಿAದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
 ಈ ಸಂದರ್ಭದಲ್ಲಿ ರಾಕೇಶ, ಜಗದೀಶ ಪಾಟೀಲ್, ಶಿಲ್ಪಾ ಉಪ್ರಾಳ, ಲಕ್ಷ್ಮೀ ತಾಯಣ್ಣ  ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net