ಮಹಾಶಿವರಾತ್ರಿ ದಿನ ಸಾಮೂಹಿಕ ವಿವಾಹ

dvd siddramanda
(ಸಿದ್ಧರಾಮಾನಂದ ಸ್ವಾಮೀಜಿ)
Published on

ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್‌ನ ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರುಪೀಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಫೆ.26ರಂದು ಸರ್ವ ಜನಾಂಗಗಳ ಸಾಮೂಹಿಕ ವಿವಾಹ ಹಾಗೂ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಸಿದ್ಧರಾಮಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿಗಳು ಅಗತ್ಯ ದಾಖಲೆಗಳನ್ನು ನೀಡಿ ಫೆ.24ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಅಂದು ಬೆಳಗ್ಗೆ ಸಾಮೂಹಿಕ ವಿವಾಹ ಕಾರ್ಯಕ್ರಮ, ಸಂಜೆಯಿಂದ ಮಹಾಶಿವರಾತ್ರಿ ಜಾಗರಣೆ ಸಮಾರಂಭ ಜರುಗಲಿದೆ.

ರಾತ್ರಿ 9ಗಂಟೆಯಿಂದ ಸಂಗೀತ, ಭಜನೆ, ನೃತ್ಯ, ಶಿವಮಂತ್ರ ಜಪ, ಪ್ರಾರ್ಥನೆ ಹಾಗೂ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಕಾರ್ಯಕ್ರಮ ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net