ಅದ್ದೂರಿ ಕರ್ಲಹೊಂಡಲಿಂಗೇಶ್ವರ ಜಾತ್ರೋತ್ಸವ

28CHIKODIGRAMEEN1
Published on

ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಕರ್ಲಹೊಂಡಲಿಂಗೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಹಾಗೂ ಗುರುವಾರ ಅದ್ದೂರಿಯಾಗಿ ನೆರವೇರಿತು.

ಪಟ್ಟಣದ ಬೀರೇಶ್ವರ ಮಂದಿರದಿಂದ ದೂಧಗಂಗಾ ನದಿಪಾತ್ರದ ಕರ್ಲಹೊಂಡಲಿಂಗೇಶ್ವರ ದೇವಸ್ಥಾನದವರೆಗೆ ಬುಧವಾರ ಕುಂಭಮೇಳ, ಪಲ್ಲಕ್ಕಿ ಉತ್ಸವವು ಭಂಡಾರದೋಕುಳಿ, ದೀರ್ದಂಡ ನಮಸ್ಕಾರವು ಸಕಲ ವಾದ್ಯಮೇಳದೊಂದಿಗೆ ಜರುಗಿದವು. ಗುರುವಾರ ರುದ್ರಾಭಿಷೇಕ, ಗ್ರಾಮ ನೈವೇದ್ಯ ಕಾರ್ಯಕ್ರಮ, ಮಧ್ಯಾಹ್ನ ಮಹಾಪ್ರಸಾದ, ಗೀ ಗೀ ಪದಗಳ ಗಾಯನ ನಡೆದವು. ಶಂಕರಜ್ಜ ಅವರು ದೇವರ ನುಡಿ ನುಡಿದರು.

ಮುಖಂಡರಾದ ಆಶೀಷ ಹುಕ್ಕೇರಿ, ರಮೇಶ ಕಮ್ಮಾರ, ರವಿ ಹಿಟಣೆ, ಸುರೇಂದ್ರ ಕಬಾಡೆ, ಪುಟ್ಟು ಕಬಾಡೆ, ಸತೀಶ ಕಬಾಡೆ, ಗಂಗಾಧರ ಹಿರೇಮಠ, ಸಚಿನ ಮಾನೆ, ಕೇದಾರಿ ಗಿಡ್ಡ, ಪುಂಡಲೀಕ ಹಿಟಣೆ, ಮಲ್ಲಪ್ಪ ಕಬಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net