ಕಾಯಕದಲ್ಲೇ ದೇವರ ಕಂಡ ಮಹಾಶಿವಶರಣ

31 RON 1 NULIYA
Published on

ರೋಣ: ಹನ್ನೆರಡನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದ ಮಹತ್ವವನ್ನು ಸಾರಿದ ನುಲಿಯ ಚಂದಯ್ಯನವರು ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು ಎಂದು ರೋಣ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಗೌರವಾಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಭಜಂತ್ರಿ ಸಮುದಾಯದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ನುಲಿಯ ಚಂದಯ್ಯನವರ 916ನೇ ಹಾಗೂ ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಗುರು, ಲಿಂಗ, ಚಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯನವರು. ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಕಾಯಕ ಜೀವಿಯಾಗಿ, ದಾಸೋಹ ಮಾಡುತ್ತ ಬದುಕಿದರು. ನುಲಿಯ ಚಂದಯ್ಯ ದಲಿತ ವರ್ಗದ ಹೆಮ್ಮೆಯ ವಚನಕಾರ ಎಂದರು.
ಆರ್.ಎಚ್. ನಿಲೋಗಲ್ಲ, ಕೊರವ ಸಮಾಜದ ತಾಲೂಕಾಧ್ಯಕ್ಷ ಯಲ್ಲಪ್ಪ ಮಾಣೆಪಡೆ, ಉಪಾಧ್ಯಕ್ಷೆ ರಂಗಮ್ಮ ಭಜಂತ್ರಿ, ಪುರಸಭೆ ಮಾಜಿ ಅಧ್ಯಕ್ಷ ರಾಮಪ್ಪ ಭಜಂತ್ರಿ, ಕೃಷ್ಣಾ ಭಜಂತ್ರಿ, ಚಂದ್ರು ಭಜಂತ್ರಿ, ಬಸವರಾಜ ಭಜಂತ್ರಿ, ಸಂಗಪ್ಪ ಭಜಂತ್ರಿ, ಎಲ್.ಎಸ್. ದಾಸಪ್ಪನವರ, ಮಹೇಶ ಸಾರಂಗಮಠ, ವೇಂಕಟೇಶ ದಿವಾನರ, ವಿ.ಆರ್. ಬಾರಕೇರ, ರಮೇಶ ಹುಲ್ಲುಜಿ, ಹನುಮಂತ ಮ್ಯಾಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net