ಮಹಾಶಿವರಾತ್ರಿ ಮಹೋತ್ಸವಕ್ಕೆ ಚಾಲನೆ

CTD 13 KABIRA-04
Published on

ಚಿತ್ರದುರ್ಗ: ನಗರದ ಕಬೀರಾನಂದಾಶ್ರಮದ ಶಿವನಾಮ ಸಪ್ತಾಹದ 93ನೇ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಸೋಮವಾರ ಕಾತ್ರಾಳ್ ಆದಿಚುಂಚನಗಿರಿ ಗೋಶಾಲೆಯಲ್ಲಿ ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಎಸ್.ಅನಿತ್‌ಕುಮಾರ್ ಅವರು ಗೋ ಪೂಜೆ ಚಾಲನೆ ನೀಡಿದರು.

ಮಹೋತ್ಸವ ಅವಧಿಯಲ್ಲಿ ನಡೆಯುವ ಶಿವನಾಮ ಸ್ಮರಣೆಯೂ ಕಬೀರಾನಂದಾಶ್ರಮದಲ್ಲಿ ಆರಂಭವಾಯಿತು. ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀಮಠದ ಕಾರ‌್ಯದರ್ಶಿಪ್ರಶಾಂತ್, ನಂದಿನಾಗರಾಜ್, ನಿರಂಜನಮೂರ್ತಿ, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ಇಂದಿನ ಕಾರ‌್ಯಕ್ರಮ: ಫೆ.14ರ ಸಂಜೆ 6.30ಕ್ಕೆ ಗುರುಸದನವನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ, ಕಾರ್ಯಕ್ರಮದ ಸಭಾ ಮಂಟಪವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.

ಕೆ.ಆರ್.ನಗರ ಕನಕಗುರುಪೀಠದ ಶ್ರೀ ಶಿವಾನಂದ ಸ್ವಾಮೀಜಿ, ಕಂಬಳಗೂಡು ಬಿಜಿಎಸ್ ಗ್ರೂಫ್ ಎಂಸಿಎಂ ಮಠದ ಶ್ರೀ ಪ್ರಕಾಶನಾಥ್ ಸ್ವಾಮೀಜಿ, ಶಿರೋಳ ಶ್ರೀ ಶಂಕರರೂಢ ಸ್ವಾಮೀಜಿ, ಬೀದರ ಗುರುದೇವ ಆಶ್ರಮದ ಶ್ರೀ ಗಣಪತಿ ಮಹರಾಜ್ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೇರಿ ನಾನಾ ಗಣ್ಯರು ಉಪಸ್ಥಿತರಿರುತ್ತಾರೆ. ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ‌್ಯದರ್ಶಿ ಶ್ರೀಧರ್ ಭಜಂತ್ರಿ ಹಾಗೂ ಗೋಶಾಲೆಗೆ ಉಚಿತವಾಗಿ ಮೇವು ಪೂರೈಸಿದವರನ್ನು ಸನ್ಮಾನಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net