ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಭಕ್ತರ ದಂಡು

8ss1malambi devalaya bhaktaru
Published on

ಶನಿವಾರಸಂತೆ: ಮಹಾಶಿವರಾತ್ರಿ ಹಬ್ಬ ಅಂಗವಾಗಿ ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶ್ರುಕವಾರ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ನೆರವೇರಿದವು.
ದೇಗುಲದಲ್ಲಿ ಮುಂಜಾನೆಯಿಂದಲೇ ಮಳೆ ಮಲ್ಲೇಶ್ವರ ಸ್ವಾಮಿಗೆ ವಿವಿಧ ಅಭಿಷೇಕ, ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿದವು. ಅರ್ಚಕ ಲಿಂಗರಾಜು ನೇತೃತ್ವದಲ್ಲಿ ಬಾಲು, ದಿವ್ಯಶ್ ಅರ್ಚಕರ ತಂಡ ಪೂಜೆ ನೆರವೇರಿಸಿತು.
ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಾವಿರಾರು ಭಕ್ತರು ಬೆಟ್ಟವನ್ನೇರಿ ಮಳೆ ಮಲ್ಲೇಶ್ವರ ಸ್ವಾಮಿಯ ದರ್ಶನ ಪಡೆದರು. ಬೆಟ್ಟದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಬೆಟ್ಟದ ಮಾರ್ಗದಲ್ಲಿ ಭಕ್ತರಿಗೆ ಹೆಗ್ಗು-ದೀಣೆಕೊಪ್ಪದ ಯುವಕರ ತಂಡ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಿಸಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಮುಖರಾದ ಎಚ್.ಪಿ.ಶೇಷಾದ್ರಿ, ಬಿ.ಕೆ.ಸುಬ್ರಮಣ್ಯ, ಎಚ್.ವಿ.ದಿವಾಕರ್, ಎಚ್.ವಿ.ಸುರೇಶ್, ಎಚ್.ಕೆ.ಸದಾಶಿವ, ಎಚ್.ಕೆ.ಹಾಲಪ್ಪ, ಎಚ್.ಎಸ್.ವಸಂತ್, ಎಚ್.ಎಸ್.ಯಶ್ವಂತ್, ಎಂ.ಇ.ವೆಂಕಟೇಶ್, ಗೌಡಳ್ಳಿ ಗಣೇಶ್, ಎಚ್.ಎಸ್.ಪಾಲಾಕ್ಷ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net