

ಬಂಟ್ವಾಳ: ಸಜೀಪಮೂಡ ಗ್ರಾಮದ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ, ಶ್ರೀ ರುದ್ರ ಸೂಕ್ತ ಅಭಿಷೇಕ, ಪ್ರಸನ್ನ ಪೂಜೆ ನಡೆಯಿತು.
ಮಡಿಪು ವಿಶ್ವ ಭಾರತಿ ಯಕ್ಷ ಸಂಜೀವಿ ಅವರಿಂದ ಶಲ್ಯ ಸಾರಥ್ಯ ಯಕ್ಷಗಾನ ತಾಳಮದ್ದಳೆ, ಕೂಟ ಮಹಾ ಜಗತ್ತು ಮಹಿಳಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ವಿಶೇಷ ಸೇವಾ ಪೂಜೆ, ರಂಗ ಪೂಜೆ ನಡೆಯಿತು. ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಪ್ರಮುಖರಾದ ದೇವಿಪ್ರಸಾದ್ ಪೂಂಜ, ಗಿರೀಶ್ ಕುಮಾರ್, ಸದಾನಂದ ಶೆಟ್ಟಿ, ಶಾಂತಿರಾಜ ರೈ, ಶ್ರೀಕಾಂತ್ ಶೆಟ್ಟಿ, ರಾಕೇಶ್ ಶೆಟ್ಟಿ, ರವಿಚಂದ್ರ ಪಂಬದ, ಚಂದ್ರಹಾಸ, ಯೋಗೀಶ್ ಬೆಳ್ಚಾಡ, ವಿಶ್ವನಾಥ ಬೆಳ್ಚಾಡ, ಸುಧಾಕರ, ಪದ್ಮನಾಭ ಪೂಜಾರಿ, ದೇವದಾಸ, ಜಯಪ್ರಕಾಶ್, ರಮೇಶ್ ಅನ್ನಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.