

ಮಡಿಕೇರಿ:
ಕೊಡಗು ಜಿಲ್ಲೆ ಸೋಮವಾರ ಪೇಟೆಯ ತಾಲ್ಲೂಕಿನ ಹಾರಂಗಿ ಮತ್ಸ್ಯಧಾಮಕ್ಕೆ ಹಾರಂಗಿ ಮಿನುಮರಿ ಉತ್ಪಾದನಾ ಕೇಂದ್ರದಿAದ 3000 ಮಹಾಶೀರ್ ಬಲಿತ ಬಿತ್ತನೆ ಮೀನುಮರಿಗಳನ್ನು ದಾಸ್ತಾನು ಮಾಡಲಾಯಿತು.
ಈ ಪ್ರದೇಶ ಮೀನುಗಾರಿಕೆ ನಿಷೇಧಿತ ಪ್ರದೇಶವಾಗಿದ್ದು ಅಳಿವಿನಂಚಿನಲ್ಲಿರುವ ಮತ್ಸ್ಯ ಪ್ರಬೇಧ ಇತರ ಸ್ಥಳೀಯ ತಳಿಗಳ ಸಂರಕ್ಷಣೆಗಾಗಿ ಮೀಸಲಿರಿಸಲ್ಪಟ್ಟಿದೆ. ಮಹಶೀರ್ ಸಂರಕ್ಷಣೆಯ ಉದ್ದೇಶದಿಂದ ಪ್ರತೀ ವರ್ಷವೂ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಮೀನು ಮರಿಗಳನ್ನು ಉತ್ಪಾದಿಸಿ ಕಾವೇರಿ ನದಿ ಮತ್ತು ಹಾರಂಗಿ ಮತ್ಸ್ಯಧಾಮಕ್ಕೆ ದಾಸ್ತಾನು ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಭಾಸ್ಕರ್ ನಾಯಕ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗಣೇಶ್, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಮಿಲನ ಕೆ. ಭರತ್, ಸಚಿನ್, ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಮತ್ತು ಸದಸ್ಯರು ಇದ್ದರು.