ಮಹಾಸತಿ, ನಾಗ ಚೌಡೇಶ್ವರಿ ದೇವರ ವರ್ಧಂತಿ

2 HNR 1
Published on

ಹೊನ್ನಾವರ: ಮೂರುಕಟ್ಟೆಯ ಶ್ರೀ ಮಹಾಸತಿ ಮತ್ತು ನಾಗ ಚೌಡೇಶ್ವರಿ ದೇವರ ವರ್ಧಂತಿ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಪ್ರತಿಷ್ಠಾ ವರ್ಧಂತಿ ನಿಮಿತ್ತ ದೇವರ ಪ್ರಸನ್ನತೆಗಾಗಿ ಮತ್ತು ಭಜಕ ಮಹಾಜನರ ಶ್ರೇಯೋಭಿವೃದ್ಧಿಗಾಗಿ ಕಲಾವೃದ್ಧಿ ಹವನ, ಕುಂಕುಮಾರ್ಚನೆ ಮತ್ತು ಪ್ರಸನ್ನ ಪೂಜೆ ಹಾಗೂ ಧಾರ್ವಿುಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ವಿವಿಧ ಸೇವೆ ಸಲ್ಲಿಸಿದರು. ಮಧ್ಯಾಹ್ನ ಮಹಾಪೂಜೆ ಹಾಗೂ ನಂತರ ಅನ್ನ ಸಂತರ್ಪಣೆ ನಡೆಯಿತು. ಅರ್ಚಕರಾದ ಬೇರೊಳ್ಳಿ ನಾರಾಯಣ ಭಟ್ಟರು ಧಾರ್ವಿುಕ ಕಾರ್ಯ ನಡೆಸಿಕೊಟ್ಟರು. ]ೕ ಮಹಾಸತಿ ದೇವತಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net