ಮೋಕ್ಷದ ಮಾರ್ಗ ತೋರಿದ ಮಹಾಸಾಧ್ವಿ

Mahasadhvi who showed the path of salvation
ಕಮತಗಿ ಸಮೀಪದ ಶಿರೂರಿನ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೂದಾನ ನೀಡಿದ ಮಲ್ಲಮ್ಮ ಗುಲಗಂಜಿ ಸಾವಿತ್ರಿ ಕೆಂಪಲಿಂಗನ್ನವರ ಇವರನ್ನು ಸನ್ಮಾನಿಸಲಾಯಿತು.
Published on

ಕಮತಗಿ: ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರಡ್ಡಿ ಮಲ್ಲಮ್ಮ ಅವರು ದಾನ, ದಾಸೋಹದ ಜತೆಗೆ ಮೋಕ್ಷದ ಮಾರ್ಗ ತೋರಿದ ಮಹಾಸಾಧ್ವಿ. ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಮಹಾನ್ ಶರಣೆಯಾಗಿದ್ದಾಳೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಮೀಪದ ಶಿರೂರು ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ವಿಕಾಸ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಲೋಕಾರ್ಪಣೆ, ಸಮುದಾಯ ಭವನ ಹಾಗೂ ವೇಮನ ಮಂದಿರದ ಮತ್ತು ದಿ.ನೀಲಪ್ಪ ಗುಲಗಂಜಿ ಕಲ್ಯಾಣ ಮಂಟಪ, ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮ ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕು.ರೆಡ್ಡಿ ಬಾಂಧವರು ಸ್ವಇಚ್ಛೆಯಿಂದ ಎಲ್ಲ ಸಮುದಾಯಗಳಿಗೂ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ರೆಡ್ಡಿ ಸಮಾಜವನ್ನು ಒಗ್ಗೂಡಿಸಿಕೊಂಡು ಸಾಮಾಜಿಕ ಕಾರ್ಯ ಮಾಡಲು ಮುಂದಾಗಬೇಕು ಎಂದರು.

ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಕಷ್ಟ, ನೋವಿನಲ್ಲಿರುವ ಜನಾಂಗಕ್ಕೆ ಸಹಾಯ ನೀಡಿ ಸ್ವಾಭಿಮಾನದ ಬದುಕನ್ನು ಸಾಗಿಸಿದಾಗ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಆದರ್ಶಗಳಿಗೂ ಪೂರಕ ಆಗುತ್ತದೆ. ಮೌಲ್ಯ ಮತ್ತು ತತ್ವಗಳಿಗೆ ಬದ್ಧರಾಗಿ ನಡೆದುಕೊಂಡ ಹೇಮರಡ್ಡಿ ಮಲ್ಲಮ್ಮ ಅವರು ಸಮಾಜದ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು. ಎರೆಹೊಸಳ್ಳಿಯ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜ ಬಾಂಧವರು ಧರ್ಮವಂತರಾಗಿ ಕಾಯಕ ನಿಷ್ಠೆಯಿಂದ ಇತರರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿ ಜೀವನ ಸಾಗಿಸಬೇಕೆಂದರು. ಗುಳೇದಗುಡ್ಡ ಮರಡಿಮಠದ ಕಾಡಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಹೋಮ ಹವನ ಪ್ರಾಣ ಪ್ರತಿಷ್ಠಾನ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷ ರವಿ ಗಿರಿಜಾ ಅಧ್ಯಕ್ಷತೆ ವಹಿಸಿದ್ದರು. ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು, ಲೋಕಾಪುರದ ಬಸವ ಪ್ರಭು ಶ್ರೀ, ಜಗನ್ನಾಥ ಶ್ರೀ, ಮಾಜಿ ಸಚಿವರಾದ ಎನ್.ಎಚ್.ಶಿವಶಂಕರರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ ಸರನಾಯಕ, ಶಾಸಕರಾದ ಎಚ್.ವೈ.ಮೇಟಿ, ಪಿ.ಎಚ್.ಪೂಜಾರ, ಜೆ.ಟಿ.ಪಾಟೀಲ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಶಿವಾನಂದ ಮೆಳ್ಳಿಗೇರಿ, ಭೂದಾನಿಗಳಾದ ಮಲ್ಲಮ್ಮ ಗುಲಗಂಜಿ, ಸಾವಿತ್ರಿ ಕೆಂಪಲಿಂಗನ್ನವರ , ಡಾ. ಶೈಲೇಶಕುಮಾರ ಎಮ್ಮಿ, ಎಸ್.ಬಿ.ಮಾಚಾ, ತಮ್ಮಣ್ಣ ಗಿರಿಜಾ, ಶಂಕರ ದೇಸಾಯಿ ಇದ್ದರು. ಸಂಜಯ ನಡುವಿನಮನಿ, ಬಿ.ಎಂ ಪಾಟೀಲ ನಿರೂಪಿಸಿ ವಂದಿಸಿದರು.

ರೆಡ್ಡಿ ಸಮಾಜದಿಂದ ಬಡ ಜನರ ಒಳಿತಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಬೇಕು. ನೂತನವಾಗಿ ನಿರ್ಮಿಸಿದ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು . -ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net