

ಬೆಳಗಾವಿ: ಇಲ್ಲಿನ ಕನ್ನಡ ಭವನದಲ್ಲಿ ಮಹಾಸಾಧ್ವಿ ಹೇಮರೆಡ್ದಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ನಗರದ ರಂಗ ಸೃಷ್ಟಿ ಕಲಾವಿದರಿಂದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಂಡಿತು.
ಲೇಖಕ ಪೊ.ರಾಮಕೃಷ್ಣ ಮರಾಠೆ, ಶಿರೀಶ ಜೋಶಿ ನಿರ್ದೇಶನ ಮಾಡಿದ್ದಾರೆ. ರಮೇಶ ಜಂಗಲ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಶಾರದಾ ಭೋಜ, ಶಾಂತಾ ಆಚಾರ್ಯ, ಶ್ರದ್ಧಾ ಪಾಟೀಲ, ಶರಣಗೌಡ ಪಾಟೀಲ, ವಿಶ್ವನಾಥ ದೇಸಾಯಿ, ಶರಣಯ್ಯ ಮಠಪತಿ, ಎ.ಎಂ.ಜಯಶ್ರೀ, ಜಯಶ್ರೀ ರಸಾಗರ, ಶೋಭಾ ಬನಶಂಕರಿ, ರಮೇಶ ಜಂಗಲ, ಶಾಂತಾ ಜಂಗಲ, ಶೈಲಜಾ ಭಿಂಗೆ, ಲತಾ ಅರಕೇರಿ, ಪಿ.ಜಿ.ಕೆಂಪಣ್ಣವರ, ಜ್ಯೋತಿ ಬದಾಮಿ, ಗಂಗಾ ತಿಮ್ಮನಾಯಕರ, ಜಯಶೀಲಾ ಬ್ಯಾಕೋಡ, ಪುಷ್ಪಾ ಮರಡೂರ, ರಮೇಶ ಮಿರ್ಜಿ ಹಾಗೂ ಸುಕಲ್ಪ ಮಠಪತಿ ಪಾತ್ರಧಾರಿಗಳಾಗಿದ್ದರು.
ನಾಟ್ಯಭೂಷಣ ಏಣಗಿ ಬಾಳಪ್ಪನವರ ಸಂಗೀತ ನಿರ್ದೇಶನದಲ್ಲಿ ಮಂಜುಳಾಜೋಶಿ, ಮುದ್ದುಮೋಹನ, ಸುಭದ್ರಮ್ಮ ಮನಸೂರ, ಶಿವಾನಂದ ಪಾಟೀಲ ಹಿನ್ನೆಲೆ ಗಾಯನ ನೀಡಿದರು. ತಬಲಾ ವಾದಕ ರಾಗಿ ನಾರಾಯಣ ಗಣಾಚಾರಿ, ಬೆಳಕಿನ ವಿನ್ಯಾಸಕರಾಗಿ ಗುರು ಪೇಡ್ನೇಕರ, ನೃತ್ಯ ಸಂಯೋಜಕರಾಗಿ ಶಾಂತಾ ಆಚಾರ್ಯ, ರಂಗ ಸಜ್ಜಿಕೆಗಾರರಾಗಿ ಶರಣಗೌಡ ಪಾಟೀಲ ಕಾರ್ಯ ನಿರ್ವಹಿಸಿದರು.