ಮೋದಿಗಾಗಿ ಮಹಾರುದ್ರ ಯಾಗ

29 TTH 01
ಕಮ್ಮರಡಿಯಲ್ಲಿ ನಡೆದ ಮಹಾರುದ್ರಯಾಗದ ಪೂರ್ಣಾಹುತಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಗೌರವಿಸಲಾಯಿತು. ಶ್ರೀಕಾಂತ ಭಟ್, ವಿಶ್ವತೀರ್ಥ ಶಾಲೆಯ ಸುರೇಶ್, ಅರ್ಚಕರು ಇದ್ದರು.
Published on

ತೀರ್ಥಹಳ್ಳಿ: ನಾಡಿನ ಸಜ್ಜನರ ಆಶೀರ್ವಾದದಿಂದ ವಿಶ್ವ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಆಡಳಿತ ನಡೆಸುವುದು ಖಚಿತ ಎಂದು ಶಾಸಕ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಕಮ್ಮರಡಿಯ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆಯಲ್ಲಿ ಜಯಗಳಿಸಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗುವಂತೆ ಹಾರೈಸಿ ಅರ್ಚಕರಾದ ಕಮ್ಮರಡಿ ಶ್ರೀಕಾಂತ ಭಟ್ಟರ ನೇತೃತ್ವದಲ್ಲಿ ನಡೆಸಿದ ಮಹಾರುದ್ರ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ದೇವಸ್ಥಾನದ ಗೌರವ ಸ್ವೀಕರಿಸಿ ಮಾತನಾಡಿದರು.
ದೇಶ ಸಮೃದ್ಧಿಯಾಗುವುದರ ಜತೆಗೆ ಲೋಕ ಕಲ್ಯಾಣಕ್ಕಾಗಿ ಇಂದು ಮಹಾರುದ್ರಯಾಗ ಮಾಡಲಾಗಿದೆ. ಹತ್ತು ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಸಮರ್ಥ ಆಡಳಿತ ನಡೆಸಿ, ಜಗತ್ತೇ ದೇಶದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು.
ಅರ್ಚಕ ಶ್ರೀಕಾಂತ ಭಟ್ ಮಾತನಾಡಿ, ದೇಶದಲ್ಲಿ ಮಳೆ, ಬೆಳೆ ಸಮೃದ್ಧವಾಗಿರಲಿ, ಭಯೋತ್ಪಾದನೆ ನಾಶವಾಗಲಿ ಎಂದು ಲೋಕಕಲ್ಯಾಣಾರ್ಥ ಯಾಗ ಮಾಡಲಾಗಿದೆ. ಜತೆಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ಸದುದ್ದೇಶದಿಂದ ಈ ಧಾರ್ಮಿಕ ಕಾರ್ಯ ನಡೆಸಲಾಗಿದೆ ಎಂದರು.
ವಿಶ್ವತೀರ್ಥ ಶಾಲೆಯ ಸುರೇಶ್, ಅರ್ಚಕರು ಇದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net