

ತೀರ್ಥಹಳ್ಳಿ: ಲೋಕಕಲ್ಯಾಣಾರ್ಥವಾಗಿ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಮಹಾರುದ್ರ ಪುನಶ್ಚರಣ ಯಾಗ ಸೋಮವಾರ ಸಂಪನ್ನಗೊAಡಿತು. ಲಕ್ಷಿ÷್ಮÃಶ ತಂತ್ರಿಗಳು ನೇತೃತ್ವದಲ್ಲಿ 80 ಮಂದಿ ಋತ್ವಿಜರಿಂದ ಈ ಯಾಗ ಜರುಗಿತು. ಎರಡು ದಿನವೂ ಬಹು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಪೂರ್ಣಾಹುತಿ ಸಂದರ್ಭದಲ್ಲಿ ಕಾರ್ಯಕ್ರಮ ಸಂಚಾಲಕ ಪಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ತಹಸೀಲ್ದಾರ್ ಎಂ.ಲಿAಗರಾಜ್, ಡಿವೈಎಸ್‌ಪಿ ಗಜಾನನ ಸುತಾರ್, ಡಾ.ಜೀವಂಧರ ಜೈನ್, ಕೊಳಾವರ ನಾಗರಾಜ್ ಸೇರಿ ಗಣ್ಯರು ಪಾಲ್ಗೊಂಡಿದ್ದರು.