ಕಲ್ಲಟ್ಟು ಕ್ಷೇತ್ರದಲ್ಲಿ ಮಹಾರುದ್ರಾಭಿಷೇಕ

kallattu
ಗಿಳಿಯಾರಿನ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.
Published on

ಕೋಟ: ಗಿಳಿಯಾರಿನ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದೇಗುಲ ಮುಖ್ಯ ಅರ್ಚಕ ಸುಧೀರ್ ಐತಾಳ್ ಧಾರ್ಮಿಕ ಕೈಂಕರ್ಯ ನೆರವೇರಿಸಿದ್ದು, ಮಹಾರುದ್ರಾಭಿಷೇಕ, ಹಗಲು ರಂಗಪೂಜೆ ಜರುಗಿದವು. ಇದೇ ವೇಳೆ ಹಲವು ಭಜನಾ ತಂಡಗಳಿಂದ ಭಜನೋತ್ಸವ ನಡೆಯಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ದೇಗುಲಕ್ಕೆ ಭೇಟಿ ನೀಡಿದರು. ಆಡಳಿತ ಮಂಡಳಿ ವತಿಯಿಂದ ಸಂಸದರನ್ನು ಗೌರವಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕಾರ್ಯದರ್ಶಿ ಹರೀಶ್ ದೇವಾಡಿಗ, ಸಿದ್ಧ ದೇವಾಡಿಗ, ಬಾಬು ಶೆಟ್ಟಿ, ಶೇಖರ್ ದೇವಾಡಿಗ, ತಿಮ್ಮ ಕಾಂಚನ್, ಶೇವಧಿ ನಾಗರಾಜ್ ಗಾಣಿಗ, ಶಾಂತಾ ಪ್ರಕಾಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net