

ಹುನಗುಂದ: ಮಹರ್ಷಿ ವಾಲ್ಮೀಕಿ ತತ್ವಾದರ್ಶಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಲಯದ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಾನ್ ಪುರುಷರ ಜಯಂತಿಗಳನ್ನು ಎಲ್ಲ ಧರ್ಮ, ಸಮುದಾಯಗಳು ಸೇರಿ ಆಚರಿಸುವ ಜತೆಗೆ ಅವರ ಸಂದೇಶಗಳನ್ನು ಅನುಸರಿಸಿದರೆ ಮಾತ್ರ ಜಯಂತ್ಯುತ್ಸವ ಸಾರ್ಥಕವಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕ ಎಚ್.ಟಿ. ರಂಗಾಪುರ ಉಪನ್ಯಾಸ ನೀಡಿದರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಶಾಂತಣ್ಣ ಸುರಪುರ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ತಾಪಂ ಇಒ ಮುರಳಿ ದೇಶಪಾಂಡೆ, ಹಿಂದುಳಿದ ಇಲಾಖೆ ಅಧಿಕಾರಿ ಸಂಗಮೇಶ ಗಡೇದ, ವಾಲ್ಮೀಕಿ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ಚಂದ್ರು ತಳವಾರ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜವ್ವ ಬಾದಾಮಿ, ಸಿಪಿಐ ಸುನೀಲ ಸವದಿ, ಸಮಾಜ ಕಲ್ಯಾಣಾಧಿಕಾರಿ ಎಂ.ಎಚ್. ಕಟ್ಟಿಮನಿ, ಬಿಇಒ ಜಾಸ್ಮೀನ ಕಿಲ್ಲೆದಾರ, ಮುಖಂಡರಾದ ಸೋಮಶೇಖರ ಬಲಕುಂದಿ, ವಿ.ಜಿ. ಗುಡದನ್ನವರ, ಸಿದ್ದಪ್ಪ ಜಾಲಿಗಿಡದ ಇತರರಿದ್ದರು.