ಜಯಂತಿ ಕೇವಲ ಆಚರಣೆಗೆ ಸೀಮಿತ ಬೇಡ

25 kem 2a
ಕೆಂಭಾವಿ ಬಳಿಯ ಮಲ್ಲಾ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ವಾಲ್ಮೀಕಿ ಜಯಂತಿ ಕರ‍್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಶ್ರೀ ವರದಾನೇಶ್ವರ ಸ್ವಾಮೀಜಿ, ರಾಜು ಧಣಿ, ವೆಂಕಟೇಶ ಬೇಟೆಗಾರ ಇತರರಿದ್ದರು.
Published on

ಕೆಂಭಾವಿ: ಮಹಾತ್ಮರ, ದಾರ್ಶನಿಕರ ಮತ್ತು ಸಮಾಜ ಸುಧಾಕರ ವೃತ್ತ, ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತ ಮಾಡದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಉತ್ಸವಗಳಿಗೆ ಅರ್ಥ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಮಲ್ಲಾ (ಬಿ) ಗ್ರಾಮದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ನಾಯಕರ ವೃತ್ತಗಳನ್ನು ಸ್ಥಾಪಿಸುವುದು ಎಷ್ಟು ಮುಖ್ಯವೋ ಆ ವೃತ್ತವನ್ನು ಸ್ವಚ್ಛ ಮತ್ತು ಸುಂದರವಾಗಿಡುವುದು ಅಷ್ಟೇ ಮುಖ್ಯವಾಗಿದೆ. ಇಂತಹ ಸ್ಥಳಗಳು ಅನೈತಿಕ ತಾಣವಾಗದಂತೆ ಕಾಯುವುದು ಸಮಾಜದ ಪ್ರತಿಯೊಬ್ಬ ಯುವಕರ ಕರ್ತವ್ಯವಾಗಿದೆ ಎಂದು ಹೇಳಿದರು.

ದೇಶಕ್ಕೆ ರಾಮಾಯಣದಂಥ ಮಹಾನ್ ಗ್ರಂಥವನ್ನು ನೀಡಿದ ವಾಲ್ಮೀಕಿ ಮಹರ್ಷಿಗಳು ರಾಮನ ಗುಣವನ್ನು ನಮಗೆ ತಿಳಿಸಿದ್ದಾರೆ. ಪ್ರತಿಯೊಂದು ಸಮಾಜ ಆದರ್ಶ ಗುಣಗಳನ್ನು ಬೆಳೆಸಿಕೊಂಡು ಎಲ್ಲ ಸಮಾಜದ ಬಾಂಧವರನ್ನು ಒಗ್ಗಟ್ಟಿನ ಮನೋಭಾವದಿಂದ ಕಂಡಾಗ ಮಾತ್ರ ಮಹಾನ್ ನಾಯಕರ ಜಯಂತಿ ಆಚರಣೆ ಮಾಡಿದ ಪುಣ್ಯ ಮತ್ತು ವೃತ್ತಗಳನ್ನು ನಿರ್ಮಾಣ ಮಾಡಿದ ಸಾರ್ಥಕತೆ ಲಭಿಸುತ್ತದೆ ಎಂದರು.

ಗೋಲಪಲ್ಲಿ ಶ್ರೀ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರೇಣುಕಾ ದೊರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಚಿಂಚೋಳಿ, ಸಮಾಜದ ಮುಖಂಡರಾದ ರಾಜಾ ವೀರರಾಯಪ್ಪ, ರಾಜು ಧಣಿ, ಎಸ್.ಎಸ್. ಪಟ್ಟಣಶೆಟ್ಟಿ, ಶಿವಮಹಾಂತ ಚಂದಾಪುರ, ಬಲಭೀಮ ನಾಯಕ, ಗೌಡಪ್ಪಗೌಡ ವಣಕ್ಯಾಳ, ವೆಂಕಟೇಶ ಬೇಟೆಗಾರ, ಮಾನಶಪ್ಪ ಘಂಟಿ, ಹಳ್ಳೆಪ್ಪ ಹವಾಲ್ದಾರ, ಹಣಮಂತ್ರಾಯ ಮಾಣಸುಣಗಿ, ಶರಣಪ್ಪ ದೊರಿ ಇದ್ದರು. ಮಲ್ಲಿಕಾರ್ಜುನ ಸ್ವಾಮಿ ನಿರೂಪಣೆ ಮಾಡಿ ಸ್ವಾಗತಿಸಿದರು.

ನಮ್ಮ ಸರ್ಕಾರದ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿ ಈಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ನಮ್ಮದೆ ಯೋಜನೆಯ ಕಾಪಿ ಮಾಡಿ ಹಲವು ಆಮಿಷ ಜನತೆಗೆ ನೀಡುತ್ತಿದೆ. ರಾಜ್ಯ ಬರಪೀಡಿತದಿಂದ ತತ್ತರಿಸಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ.
| ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net