

ಹುಮನಾಬಾದ್: ರಾಮಾಯಣದಂತಹ ಮಹಾನ್ ಗ್ರಂಥವನ್ನು ಲೋಕಕ್ಕೆ ಕೊಡುಗೆ ನೀಡಿರುವ ಮಹರ್ಷಿ ವಾಲ್ಮೀಕಿ ಅವರು ಕೇವಲ ವಾಲ್ಮೀಕಿ ಸಮಾಜಕ್ಕೆ ಸೀಮಿತವಾದವರಲ್ಲ. ಇವರು ಸರ್ವಜನಾಂಗಕ್ಕೆ ಬೇಕಾಗಿದ್ದಾರೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಕೋಳಿವಾಡ, ವಾಂಜ್ರಿ ಬಡಾವಣೆಯಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ನಿಮಿತ್ತ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯದಲ್ಲಿ ಭಾರತದ ಮಾದರಿ ಸಂಸ್ಕೃತಿ, ಸಂಸ್ಕಾರ, ರೀತಿ ನೀತಿ, ಆಚಾರ, ವಿಚಾರ, ಉಡುಗೆ ತೊಡಿಗೆಗಳನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಆದ್ದರಿಂದ ವಾಲ್ಮೀಕಿ, ಭಕ್ತ ಕನಕದಾಸ, ಬುದ್ಧ, ಜಗಜ್ಯೋತಿ ಬಸವಣ್ಣ, ಬಾಬಾಸಾಹೇಬï ಅಂಬೇಡ್ಕರ್ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಅವರಂತೆ ಬಾಳಲು ಪ್ರಯತ್ನ ಮಾಡೋಣ ಎಂದು ಹೇಳಿದರು.
ಹಳ್ಳಿಖೇಡ (ಕೆ)ದ ವಾಲ್ಮೀಕಿ ಆಶ್ರಮದ ಗುರು ಶ್ರೀ ದತ್ತಾತ್ರೆಯ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ದಂಡಾಧಿಕಾರಿ ಅಂಜುಮ್ ತಬಸ್ಸುಮ್, ಜಿಲ್ಲಾ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ನಾಗಭೂಷಣ ಸಂಗಮ, ಪ್ರಮುಖರಾದ ವಾಲ್ಮೀಕಿ ಪೊಲದಾಸ, ಅವಿನಾಶ ಪೊಲದಾಸ, ಕಿಶೋರ ನಟ್ಟಿ, ಲಖನ ಕೋಳಿವಾಡ, ಸಂತೋಷ ಸಂಗಮ, ಈರಪ್ಪ ಮಚಕುರಿ, ಬಲವಂತ ಪೊಲದಾಸ, ವಿನಾಯಕ ಮಂಕೋಜಿ, ಅನಿಲ ಪಿ., ಜಗನ್ನಾಥ ಮಚಕೂರಿ, ಸುನೀಲ ಮಾನಕಾರೆ, ವಾಲ್ಮೀಕಿ ಮಾನಕಾರೆ, ನಾಗು ಮಚಕೂರಿ, ಭೀಮರಾವ, ನರಸಿಂಹ, ಈಶ್ವರ ಮಾನಕಾರೆ, ಶಿವಾಜಿ ಮಾನಕಾರೆ, ರಾಜರೆಡ್ಡಿ, ಲಿಂಗುರೆಡ್ಡಿ, ರಾಘುರೆಡ್ಡಿ, ಬಸವರಾಜ ಮುಚಳಂಬ ಇತರರಿದ್ದರು.