ವಿವಿಧೆಡೆ ಮಹರ್ಷಿ ವಾಲ್ಮೀಕಿ ಸ್ಮರಣೆ

IMG_20231028_211332_454.jpg
Published on

ಹುಬ್ಬಳ್ಳಿ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರದ ವಿವಿಧೆಡೆ ಶನಿವಾರ ಭಕ್ತಿಭಾವದಿಂದ ಆಚರಿಸಲಾಯಿತು.

ಇಲ್ಲಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಕುಲಪತಿ ಡಾ. ಸಿ. ಬಸವರಾಜು ಇವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.

ನಂತರ ಮಾತನಾಡಿದ ಅವರು, ವಾಲ್ಮೀಕಿ ಈ ದೇಶದ ಆದಿ ಕವಿಯಾಗಿದ್ದು, 24 ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಜೀವನದ ಮೌಲ್ಯಗಳಾದ ಪ್ರೀತಿ, ವಿಶ್ವಾಸ, ನಂಬಿಕೆ, ಸಹಬಾಳ್ವೆಗಳನ್ನು ಅರಿತು ಮನುಕುಲ ಬದುಕಬೇಕೆಂದು ಸಾರಿದರು ಎಂದರು.

ಮಹಾಕಾವ್ಯ ರಾಮಾಯಣ ರಚಿಸಿ ಸಮಾಜದ ಮಹತ್ವ ವೃದ್ಧಿಸಲು ಕಾರಣಕರ್ತರಾಗಿದ್ದು, ಇವರ ಬರಹ ಅನೇಕ ಕವಿಗಳಿಗೆ ಹಾಗೂ ಸಾಹಿತಿಗಳಿಗೆ ಸ್ಫೂತಿರ್ ತುಂಬಿದೆ ಎಂದರು.

ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾಥಿರ್ಗಳು ಭಾಗವಹಿಸಿದ್ದರು.

ಪರಿಸರ ಸಮಿತಿಯಿಂದ: ಹುಬ್ಬಳ್ಳಿಯ ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ, ಹೊರಕೇರಿ ಮಾಸ್ತರ ಪ್ರತಿಷ್ಠಾನ ಹಾಗೂ ಬಸವ ಪರಿಸರ ಸಂರಣಾ ಸಮಿತಿ ವತಿಯಿಂದ ಇಂದಿರಾ ಗಾಜಿನಮನೆ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ವಾಕರಸಾ ಸಂಸ್ಥೆಯ ಮಾಜಿ ಅಧ್ಯ ಸದಾನಂದ ಡಂಗನವರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಅಧ್ಯ ಎಸ್.ಎಂ. ಸಾತ್ಮಾರ, ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ, ಚನ್ನಬಸಪ್ಪ ಧಾರವಾಡಶೆಟ್ಟರ, ಅನೀಲ ಬುನಿಯನ್, ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net