ಮಹರ್ಷಿ ಆದರ್ಶ ಅಳವಡಿಸಿಕೊಳ್ಳಿ

06Ylb01
ಯಲಬುರ್ಗಾ ತಾಲೂಕಿನ ಹುಲೇಗುಡ್ಡದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಗೆದಗೇರಿ ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ ಉದ್ಘಾಟಿಸಿದರು. ಸಮುದಾಯದ ತಾಲೂಕು ಅಧ್ಯಕ್ಷ ಮಾನಪ್ಪ ಪೂಜಾರ, ಪ್ರಮುಖರಾದ ಹನುಮಗೌಡ ಮಾಲಿಪಾಟೀಲ್, ಬಾಳಪ್ಪ ಬಂಡ್ಲಿ, ಗುಂಡನಗೌಡ ಮಾಲಿಪಾಟೀಲ್ ಇದ್ದರು.
Published on

ಯಲಬುರ್ಗಾ: ಮನುಕುಲಕ್ಕೆ ರಾಮಾಯಣ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ ಆದರ್ಶವನ್ನು ಎಲ್ಲರೂ ಜೀನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೆದಗೇರಿ ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ ಹೇಳಿದರು.

ತಾಲೂಕಿನ ಹುಲೇಗುಡ್ಡದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ದಾರ್ಶನಿಕರು ಜಾತಿ ವ್ಯವಸ್ಥೆ ಕಂಡಿಸುತ್ತಾರೆ. ಸಮಾಜದ ಹಿತಕ್ಕಾಗಿ ಶ್ರಮಿಸಿದ ಅವರುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ವಾಲ್ಮೀಕಿ ನಾಯಕ ಸಮುದಾಯದ ತಾಲೂಕು ಅಧ್ಯಕ್ಷ ಮಾನಪ್ಪ ಪೂಜಾರ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣವಂತರಾದಾಗ ಸಮಾಜ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಪಪಂ ಸದಸ್ಯ ಕಳಕಪ್ಪ ತಳವಾರ್, ಪ್ರಮುಖರಾದ ರುದ್ರಪ್ಪ ನಡಲಮನಿ, ಚನ್ನಬಸವ ಕುಲಕರ್ಣಿ, ಮಂಜು ಕಲ್ಲೂರು, ಓಬಳೆಪ್ಪ ಕುಲಕರ್ಣಿ, ಯಂಕಪ್ಪ ಜುಟ್ಲರ, ದುರುಗಪ್ಪ ವಡ್ರಕಲ್, ಭೀಮಣ್ಣ ಮುರಡಿ, ಬಾಳಪ್ಪ ಬಂಡ್ಲಿ, ಗುಂಡನಗೌಡ ಮಾಲಿಪಾಟೀಲ್, ಶಂಕರಗೌಡ ಸಾಲಭಾವಿ, ಪರಶುರಾಮ ತಳವಾರ್, ಕುದರೆಲ್ಲಪ್ಪ ಹುಳ್ಳಿ, ಹನುಮಗೌಡ ಮಾಲಿ ಪಾಟೀಲ್, ವೀರಭದ್ರಗೌಡ ಮ್ಯಾಗೇರಿ, ಶರಣಗೌಡ ಮಾಲಿ ಪಾಟೀಲ್, ಕುದರೇಲ್ಲಪ್ಪ ಮಾಲಿಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net