ಮಹರ್ಷಿ ಸಂದೇಶ ಎಲ್ಲರಿಗೂ ಆದರ್ಶ

4GKK2
Published on

ಗೋಕಾಕ: ಮಹರ್ಷಿ ಭಗೀರಥರು ಘೋರ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು ಸಕಲ ಜೀವರಾಶಿಗಳಿಗೆ ಬದುಕು ನೀಡಿದರು. ಅವರ ಜೀವನ ಮತ್ತು ಸಂದೇಶ ನಮಗೆಲ್ಲ ಆದರ್ಶ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಶಾಸಕರ ಗಹ ಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಶಿ, ಶಾಸಕರ ಆಪ್ತ ಸಹಾಯಕ ಭೀಮಗೌಡರ ಪೋಲಿಸಗೌಡರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಲಕ್ಕಪ್ಪ ತಹಸೀಲ್ದಾರ್, ಜಯಾನಂದ ಹುಣಶ್ಯಾಳಿ, ಲಕ್ಷ್ಮಣ ತಳ್ಳಿ, ಜಗದೀಶ ಸದರಜೋಶಿ, ಮಂಜುನಾಥ ಪ್ರಭುನಟ್ಟಿ, ವಿರೇಂದ್ರ ಎಕ್ಕೇರಿಮಠ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net