ವಾಲ್ಮೀಕಿ ರಾಮಾಯಣ ಸಹೋದರತ್ವದ ಸಂದೇಶ

Alavandi valmiki jayanti
ಅಳವಂಡಿಯ ಕವಲೂರಿನಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಮರುಳಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಕೆ.ಎನ್.ಪಾಟೀಲ, ದೇವಪ್ಪ, ಭರಮಪ್ಪ, ನಾಗರಾಜ, ಮುತ್ತಣ್ಣ, ಮಾರುತಿ, ರಾಮಣ್ಣ, ಚನ್ನಪ್ಪ, ಹನುಮಂತಪ್ಪ ಇತರರಿದ್ದರು.
Published on

ಅಳವಂಡಿ: ಶರಣರ ಆದರ್ಶಗಳನ್ನು ಅಳವಡಿಸಿಕೊಂಡಾಗ ಸಮೃದ್ಧಿಯಿಂದ ಬದುಕಲು ಸಾಧ್ಯ ಎಂದು ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

ಸಮೀಪದ ಕವಲೂರಿನಲ್ಲಿ ಮಹರ್ಷಿ ವಾಲ್ಮೀಕಿ ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರಿಂದ ಶನಿವಾರ ಹಮ್ಮಿಕೊಂಡಿದ್ದ 14ನೇ ವರ್ಷದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ಮಹಾತ್ಮರ ನುಡಿಗಳು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ. ಜಯಂತಿಗಳನ್ನು ಸರ್ವ ಧರ್ಮದವರು ಆಚರಿಸಿದರೆ ಸಮನ್ವಯತೆ ಬೆಳೆಯಲಿದೆ. ವಾಲ್ಮೀಕಿ ರಾಮಾಯಣ ಸಹೋದರತ್ವ, ಸಮಾನತೆಗಳಿಂದ ಕೂಡಿದೆ ಎಂದರು.

ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ ಮಾತನಾಡಿ, ವಿಶ್ವಕ್ಕೆ ಮಹಾನ್ ಗ್ರಂಥ ನೀಡಿದ ಮಹರ್ಷಿ ಅವರ ಮಾರ್ಗದಲ್ಲಿ ನಡೆಯಬೇಕು. ಎಲ್ಲರೂ ವಿದ್ಯಾವಂತರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಇದಕ್ಕೂ ಮುನ್ನ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು. ಕಳಸ, ಕುಂಭ ಹಾಗೂ ಜಾನಪದ ವಾದ್ಯಗಳು ಗಮನ ಸೆಳೆದವು.

ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ, ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ, ನೀಲಪ್ಪ, ಹೊನ್ನಪ್ಪಗೌಡ, ರಾಮಣ್ಣ ಚೌಡಕಿ, ಹನುಮಂತಪ್ಪ ಹ್ಯಾಟಿ, ಚನ್ನಪ್ಪ ಹಂಚಿನಾಳ, ಸುರೇಶ ಹಲವಾಗಲಿ, ಹನುಮಂತ, ನಾಗರಾಜ ಕಗ್ಗಲ್, ಮುತ್ತಣ್ಣ ಬಿಸರಳ್ಳಿ, ಮಾರುತಿ ಕಟಗಾಲಿ, ದೇವಪ್ಪ ಕಟ್ಟಿಮನಿ, ಮಲ್ಲಮ್ಮ, ಅನ್ನಪೂರ್ಣ, ರಾಮಣ್ಣ ಚೌಡಕಿ, ಹನುಮಂತಪ್ಪ ಹ್ಯಾಟಿ, ನೀಲಪ್ಪ ಕರಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net