ರಾಮಾಯಣದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

7 Dwd 4
Published on

ಧಾರವಾಡ: ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಮಹಾಕಾವ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಉಪ್ಪಾರ ಹೇಳಿದರು.

ನಗರದ ಕ್ಲಾಸಿಕ್ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಲಾಸಿಕ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿ.ಗು. ಹಿರೇಮಠ ಮಾತನಾಡಿ, ರಾಮಾಯಣ ಮಹಾನದಿ ಇದ್ದ ಹಾಗೆ. ವಾಲ್ಮೀಕಿಯವರು ಮಹಾಪರ್ವತ ಇದ್ದಂತೆ ಎಂದರು.

ಪ್ರೊ. ಸಚ್ಚಿದಾನಂದ ಉಪ್ಪಾರ, ಮಹೇಂದ್ರ, ಪ್ರಜ್ವಲ್ ಪತಂಗೆ ಹಾಗೂ ಭೋದಕರು ಇದ್ದರು. ಸಾಕ್ಷಿ ಪ್ರಾರ್ಥಿಸಿದರು. ಅನಿತಾ ಸ್ವಾಗತಿಸಿದರು. ಅನಿಲ ನಾಯ್ಕ ವಂದಿಸಿದರು. ರಮೇಶ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net